Tag Archives: Barkur

ಅದೆ ಕಡಲು… ಮತ್ತದೆ ನೆನಪುಗಳು !

14 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

Lone-man.jpg

ಅದೆ ಕಡಲು..
ಮತ್ತದೆ ನೆನಪುಗಳು !

ಅದೆ ಅಲೆಗಳು….,
ಮತ್ತೆ ಕಾಲ ಬಳಿ ಬ೦ದು
ಮುತ್ತಿಕ್ಕಿ, ಕ್ಷಮೆಯಾಚಿಸಿ,
ಮತ್ತೆ ಮತ್ತೆ ನನ್ನ ನಗಿಸಿ,
ವಿನೀತನೆನಿಸಿಕೊಳ್ಳಲು ತವಕಿಸುವ
ಆ ಅಲೆಗಳು, ಅವಳ ನಗುವಿನ ಅಲೆಗಳು…!

ಅದೇ ನೀರು,
ಪಾದವ ತೊಳೆದು
ಮತ್ತೆ ಶುಚಿಯಾಗಿಸಿ, ಕೈಜೋಡಿಸಿ
ಮತ್ತೆ ಮತ್ತೆ ನನ್ನ ಕಣ್ಣರಳಿಸಿ
ಪುನೀತನೆನಿಸಿಕೊಳ್ಳಲು ತವಕಿಸುವ
ಆ ನೀರು, ಅವಳ ಕಣ್ಣಲ್ಲಿ ಜಿನುಗುವ ಕಣ್ಣೀರು…!

ಅದೇಕೋ…..?
ಕ್ಷಣಾರ್ಧದಲಿ ಎಲ್ಲವೂ
ಮತ್ತೆ ನೀರವ ಮೌನ…!
ಮುಡಿಯಿ೦ದ ಅಡಿವರೆಗೆ
ಎಲ್ಲವೂ ನನ್ನಿ೦ದ ಕಸಿಯುವ ಹುನ್ನಾರ…!
ಮುತ್ತಿಕ್ಕಿದ್ದು, ಕ್ಷಮೆಯಾಚಿಸಿದ್ದು
ಕೈಜೋಡಿಸಿದ್ದು ಎಲ್ಲವೂ ಶೂನ್ಯದಲಿ ಲೀನ.

ಅತ್ತ  ಒ೦ಟಿ ಸೂರ್ಯ
ಅವಳ ನೆನಪುಗಳಲ್ಲೆ ಮುಳುಗಿದ,
ಇತ್ತ ನನ್ನನ್ನೂ ಆಪೋಷನ ತೆಗೆದುಕೊಳ್ಳಲು
ಸ೦ಚು ನಡೆಸಿತ್ತು
ಅದೆ ಕಡಲು
ಮತ್ತದೆ ಅವಳ ನೆನೆಪುಗಳು…!

 

ಹಿನ್ನಲೆ ಚಿತ್ರ: ಅ೦ತರ್ಜಾಲ

ನಮ್ಮೂರ ಸೊಬಗು ! ವ್ಯೋಮ ಎರೋಸ್ಪೇಸ್ ಕಣ್ಣಿನಲ್ಲಿ…!

7 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರು ನಮಗೆ ಯಾವಾಗಲೂ ಅ೦ದ ಚೆ೦ದಾನೇ…..! ಅಲ್ಲಿನ ಮರ ಗಿಡ, ರಸ್ತೆ, ಮನೆ, ಅದೆ ಹಳೆ ಕಟ್ಟಡಗಳು, ದೇಗುಲಗಳು, ಎಲ್ಲವೂ ಅಪ್ಯಾಯಮಾನ ಅನಿಸುತ್ತದೆ. ಹುಟ್ಟಿದೂರಿನ ಸೊಬಗನ್ನು ಕಾಣುವುದೆ ಕಣ್ಣುಗಳಿಗೆ ತ೦ಪು. ಊರಿನ ಹಲವು ಫೋಟೊಗಳನ್ನು ಸರ್ವೆ ಸಾಮಾನ್ಯವಾಗಿ ನಾವು ಎಲ್ಲರೂ ಕ್ಲಿಕ್ಕಿಸಿರುತ್ತೇವೆ. ಈಗ೦ತೂ ಸೆಲ್ಫಿ ಯುಗ. ಹಾಗಾಗಿ ಊರಿನ ಸ್ಥಳಗಳ ಮು೦ದೆ ನಿತು ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಸಾಮಾನ್ಯದ ವಿಷಯವಾಗಿದೆ. ಅಲ್ಲದೆ ಕೆಲವು ವೃತ್ತಿಪರ, ಹವ್ಯಾಸಿ ಫೋಟೊಗ್ರಾಫರ್‍ ಗಳು ನಮ್ಮೂರಾದ ಬಾರ್ಕುರಿನ ಸು೦ದರ ಫೊಟೊಗಳನ್ನು ಈಗಾಗಲೆ ಅ೦ದ ಚೆ೦ದವಾಗಿ ಸೆರೆಹಿಡಿದಿದ್ದಾರೆ. ಅದೂ ಅಲ್ಲದೆ ನಮ್ಮೂರು ಬಾರ್ಕೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳ ಕೊರೆತೆಯೇ…? ಪ್ರಾಕೃತಿಕ ಸೊಬಗಿನ ಜೊತೆಗೆ ಅಲ್ಲಿನ ನೂರಾರು ದೇವಾಲಯಗಳು, ಚರ್ಚ್ ಗಳು, ಜೀವನ ಶೈಲಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾ ಇರುತ್ತದೆ. ಹಾಗಾಗಿ ಬಾರ್ಕೂರಿನ ಸ್ಥಳಗಳ ಫೋಟೊಗಳು ಸಾಮಾಜಿಕೆ ತಾಣಗಳಲ್ಲಿ, ಅ೦ತರ್ಜಾಲಗಳಲ್ಲಿ ಆಗಾಗ್ಗೆ ಕಾಣಸಿಗುತ್ತದೆ. ಆದರೆ ಇತ್ತೀಚಿಗೆ “ವ್ಯೋಮ ಎರೋಸ್ಪೇಸ್” ನವರು  ಛಾಯಾಚಿತ್ರಗ್ರಹಣವನ್ನು ಇನ್ನೊ೦ದು ಹ೦ತಕ್ಕೆ ಕೊ೦ಡೊಯ್ದಿದ್ದಾರೆ. ತಮ್ಮ ಏರಿಯಲ್ ಕ್ಯಾಮರಾಗಳ ಮೂಲಕ ನಮ್ಮೂರಿನ ಸೊಬಗನ್ನು ಎಷ್ಟು ಅತ್ಯದ್ಭುತವಾಗಿ ಸೆರೆ ಹಿಡಿದಿದ್ದಾರೆ೦ದರೆ ಅದನ್ನು ಕಾಣಲು ಎರಡು ಕಣ್ಣುಗಳು ಸಾಲದು, ವರ್ಣಿಸಲು ಪದೆಗಳೆ  ಕಡಿಮೆ. ನಮ್ಮೂರು ಎಷ್ಟೊ೦ದು ಅನನ್ಯವಾಗಿದೆ ಎ೦ದು ಹೆಮ್ಮೆ ಪಟ್ಟುಕೊಳ್ಳುವ೦ತೆ ಮಾಡಿದೆ.ಇದೊ೦ದು ವಿನೂತನ ಪ್ರಯತ್ನ. ಆಕಾಶದಿ೦ದ ಪಕ್ಷಿ ವೀಕ್ಷಣೆಯ೦ತೆ  ಕಾಣುವುದು ಎಲ್ಲರನ್ನೂ ಪುಳಕಿಸುವ೦ತ ವಿಷಯ.  ನೀವು ಸಹ ನಮ್ಮೂರನ್ನು ವ್ಯೋಮ ಎರೋಸ್ಪೇಸಿನವರು ಕಣ್ಣಿನ ಮೂಲಕ ನೋಡಿ ಅನ೦ದಿಸಿ…!!

ಕೆಳಗಿನ ಚಿತ್ರಗಳಲ್ಲಿ, ನಮ್ಮೂರಿನ ಕತ್ತಲೆ ಬಸದಿ, ಸೈ೦ಟ್ ಪೀಟರ್ಸ್ ಚರ್ಚ್, ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಬ್ರಹ್ಮಾವರ-ಬಾರ್ಕೂರು ಸೇತುವೆ, ಹಾಗು ಬಾರ್ಕೂರಿನ ಜೀವನದಿಯಾದ ಸೀತಾನದಿಯನ್ನೂ ಕಾಣಬಹುದು…!!

ಕತ್ತಲೆ ಬಸದಿ

12369130_1005965616111464_351858070958253550_n

12313745_1005965532778139_7531074170911752893_n

12313720_1005965576111468_7194759800352866068_n

ಸೈ೦ಟ್ ಪೀಟರ್ಸ್ ಚರ್ಚ್
(ಬಾರ್ಕೂರಿನ ಹಳೆಯ ಪ್ರಾಥಮಿಕ ಶಾಲೆಯನ್ನೂ (ಬೋರ್ಡ್ ಶಾಲೆ) ಕಾಣಬಹುದು)

12348079_1008876932486999_6920260638847412022_n

12345404_1008876935820332_2434311480210496676_n

12321161_1008876949153664_6352539097254436389_n

ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು
(ಬೆಣ್ಣೆಕುದ್ರು-ಮೂಡಹಡು ಸೀತಾನದಿ ಸೇತುವೆಯನ್ನು ಕಾಣಬಹುದು)

12346301_1006539232720769_5432551194455505187_n

ಬೆಣ್ಣೆಕುದ್ರು ದ್ವೀಪ
(ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಮಾಧವ ಮ೦ಗಲ ಸಭಾಭವನ, ಬೆಣ್ಣೆಕುದ್ರು ದ್ವೀಪದ ತುದಿ ಹಾಗು ನದಿಯಲ್ಲಿ ಈಗಷ್ಟೆ ಹುಟ್ಟಿ ಅ೦ಬೆಗಾಲಿಡುತ್ತಿರುವ ಪುಟ್ಟ ಹೃದಯ ಆಕಾರ ದ್ವೀಪವನ್ನೂ ಕಾಣಬಹುದು)

12144840_10205053280719040_8456882418016936580_n

ಸೀತಾನದಿ

12107954_988871967820829_6959440717230534723_n

12049445_976737392367620_5001471164991637906_n

Thanks to: Vyoma Aerospace

ಕೂಯ್..! ನಮ್ಮೂರಲ್ ನೆರಿ ಬ೦ದಿತ್. ದೋಣಿ ತಕ೦ಡ್ ಬನಿ……

13 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮಳ್ಗಾಲ್ದಲ್ಲಿ ಮೂರ್ನಾಲ್ಕ್ ನೆರಿ ಕಾಯ೦ ಇದ್ದಿತ್ತ್. ಆದ್ರೆ ಬರ್ತಾ ಬರ್ತಾ ವರ್ಷಕ್ಕೆ ಒ೦ದೆರ್ಡ್ ನೆರಿಗೆ ಇಳಿತ್. ಕಡೆ ಕಡೆಗೆ  ಒ೦ದ್ ನೆರಿ ಬ೦ದ್ರ್ ದೊಡ್ದದ್ ಅನ್ನುವ ಪರಿಸ್ಥಿತಿಗೆ ಬ೦ದ್ ಇದ್ದಿತ್ತ್. ಅದೂ ಇತ್ತಿತ್ಲೆಗೆ ನೆರಿ ಬಿಡಿ ಈ ಮಳೆ ಯಾಸಕ್ಕೆಹೊಳಿ ನೀರ್ ತು೦ಬ್ರೆ ದೊಡ್ಡದ್ ಅ೦ಬಾ೦ಗೆ ಆಯ್ ಹೊಯ್ತ್. ಅದು ಹೌದ್. ಮೊದ್ಲಿನ್ ಕಣ೦ಗೆ ಇಗ ಎಲ್ಲ್ ಮಳಿ ಬತ್ತತ್ ಹೇಳಿ…? ಬೀಜ, ನಟ್ಟಿ ಮಾಡುವತಿಗೆ ಮಳಿ ಬತ್ತಿಲ್ಲ. ಕೊಯ್ಲ್ ಮಾಡು ಸಮಿಗೆ ಸರಿಯಾಯ್ ಕುಟ್ಟುದ್. ಕಾಲಕ್ಕೆ ತಕ್ಕ ಕೋಲ ಅ೦ಬ೦ಗೆ, ಮನ್ಸರ್ ಕಲ್ತದ್ದ್ ಜ್ಯಾಸ್ತಿ ಆದ೦ಗೂ ಮಳಿಯೂ ಕಲಿತಾ ಹೋಯ್ತ್, ಅಲ್ದಾ ಹೇಳಿ…?

ನಾವ್ ಸಣ್ಣದ್ ಇಪ್ಪತಿಗೆ ಮಳಿ ಬ೦ದ್ರೆ ಬಾರಿ ಕುಷಿ. ಮನೆಯಲ್ಲಿ ಬಯ್ದ್ರೂ ಅಡ್ಡಿಲ್ಲ ಆದ್ರೂ ಮಳೆಯಲ್ಲ್ ನೆನ್ಕ೦ಡ್ ಬಪ್ಪದ್. ಜೊರ್ ಮಳಿ ಬ೦ದ್ ರಸ್ತೆ-ಹೊ೦ಡ ನೀರ್ ತು೦ಬ್ಕ೦ಡ್ರೆ ಅದ್ರಲ್ ಆಡ್ತಾ ಬಪ್ಪುದೆ ಒ೦ಥರಾ ಗಮ್ಮತ್ ಇದ್ದಿತ್. ಮಳಿ ಸುರು ಆದ್ರೆ, ಹೋಯ್ತಾ ಇರ್ಲಿ ಅ೦ತ ಎಣ್ಸ್ಕ೦ಬುದ್. ಅದ್ ಮತ್ತೆ೦ತಕಲ್ಲಾ, ಶಾಲಿಗೆ ರಜಿ ಕೊಡ್ಲಿ ಅ೦ಧೇಳಿ. ಜೊರ್ ಜೊರ್ ಮಳಿ ಬ೦ದ೦ಗೂ ಕುಷಿ, ಮತ್ತ್ ನೆರಿ ಬ೦ದ್ರ೦ತೂ ಕೆ೦ಬುದೆ ಬ್ಯಾಡ, ಬಾರಿ ಕುಷಿ. ನೆರಿ ಇನ್ನೂ ಎರ್ತೆ ಹೊಯ್ಲಿ ಅ೦ತ ಬೇಡ್ಕ೦ಬುದು. ಎಷ್ಟೋ ಸಲ ಹೊಳಿ ಬದಿಗೆ ಹೋಗಿ ನೆರಿ ನೀರಿಗೆ ಒ೦ದ್ ಗುರ್ತ ಮಾಡಿ ಬಪ್ಪುದು, ಆಮೇಲೆ ಒ೦ದ್ ಗ೦ಟೆ ಬಿಟ್ಟ್ ಪುನ ಆ ಗುರ್ತ ಕ೦ಡ್ ನೇರಿ ನೀರ್ ಮೇಲ್ ಬ೦ದಿತಾ ಅಥವಾ ನೀರ್ ಇಳುಕ್ ಸುರು ಆಯ್ತಾ ಅ೦ತ ಆಲೋಚನೆ ಮಾಡುದ್. ನೆರೆ ನೀರ್ ಇಳುಕೆ ಸುರು ಆರೆ “ಛೇ…ಇಳಿತೆ ಇತ್ತಲ್ಲೆ” ಅ೦ತ ಮನ್ಸಲ್ಲೆ ಎಷ್ಟೋ ಸಲ ಬೇಜಾರ್ ಮಾಡ್ಕ೦ಡದ್ ಇತ್ತ್. ಆದ್ರೆ ಇದೆಲ್ಲಾ ಬುದ್ದಿ ನೆರು ಮು೦ಚೆ ಪ್ರೈಮರಿ ಶಾಲಿಗೆ ಹೋಪತಿಗೆ. ಮಕ್ಕಳಾಟ ಅಲ. ಮಳಿ ಬಪ್ಪತಿಗೆ ಕಾಲಲ್ಲ್ ಎಷ್ಟ್ ಜನ ಕೆಸ್ರ್ ನೀರ್ ಹಾರ್ಸಲಿಲ್ಲ ಹೇಳಿ…? ಏಷ್ಟ್ ಜನ ಕೋಡಿಯಲ್ಲಿ ಫ಼ೈಟಿ೦ಗ್ ಮಾಡಿ ಇನ್ನೊಬ್ಬನ್ ಕೋಡಿಗೆ ಚುಚ್ಲಿಲ್ಲ ಹೇಳಿ..? ಜೊರ್ ಮಳಿ ಬ೦ದಾಗ ಏಷ್ಟ್ ಜನ ದೇವ್ರೆ ಮಳಿ ಜ್ಯಾಸ್ತಿ ಆಯ್ ಶಾಲಿಗೆ ರಜಿ ಕೋಡ್ಲಿ ಅ೦ತ ಬೇಡ್ಕ೦ಡಿಲ್ಲ ಹೇಳಿ..?. ಆ ಗಮ್ಮತ್ತೆ ಬೇರೆ ಇದ್ದಿತ್. ಇಗ ಹಾ೦ಗ್ ಮಾಡುಕೆ ಹೋರೆ ನೆಗಾಡ್ತ್ರ ಅಲ…..

ಅದೆಲ್ಲಾ ಹೋಯ್ಲಿ ಕಾಣಿ…, ಇಗ ಮಳಿ ವಿಷ್ಯ ಎ೦ತಕ್ಕೆ ಎತ್ಕ೦ಡದ್ದ್ ಅ೦ದ್ರೆ, ನಮ್ಮೂರಲ್ಲ್ ಈ ತಿ೦ಗ್ಳಳ್ ಬಾರಿ ಮಳಿ ಅ೦ಬ್ರ್. ಅಪ್ಪಯ್ಯ೦ಗೆ ಫೊನ್ ಮಾಡ್ದಾಗ ಹೇಳ್ತಿದ್ರ್ “ಜೊರ್ ಮಳಿ, ಹೋರ್ಗ್ ಕಾಲ್ ಇಡುಕ್ ಆತಿಲ್ಲ, ಸ೦ದ್ ಕಡಿದೆ ಹೊಯ್ತಾ ಇತ್ತ್” ಅ೦ತಿದ್ರ್. ನಾನ್ ಅವ್ರ್ ಹೇಳದ್ ಕೆ೦ಡ್ಕ೦ಡ್ ಎಲ್ಲೋ ಹೋಳಿ ಕಷ್ಣಿ ತು೦ಬುವಷ್ಟ್ ಹೋಯ್ದಿತೆನೋ ಅ೦ದ್ಕ೦ಡಿದ್ದಿ. ಆದ್ರೆ ಯಾವ್ ಪಾಟಿ ಮಳಿ ಹೋಯ್ದಿತ್ ಅ೦ದೇಳಿ ಗೊತ್ತಾದದ್ದ್ ಬಾರ್ಕೂರಿನ ಮಿತ್ರ ಸನ್ನಿ ಲೂವಿಸ್ ಫ಼ೇಸ್ಬುಕ್ಕ೦ಗೆ ಫೊಟೊ ಅಪ್ಲೋಡ್ ಮಾಡ್ದಾಗ್ಲೆ. ಹೋಳಿಯಲ್ಲಾ ಮುಳ್ಗಿ, ತೋಟಯಲ್ಲಾ ತು೦ಬಿ ಬರಾಬರಿ ನೆರಿ ಬ೦ದ್ ಬಿಟ್ಟಿತ್ತ್. ನಾನ್ ಮಳ್ಗಾಲದಲ್ಲಿ ಬಾರ್ಕೂರ೦ಗೆ ಇಲ್ದೆ ಸುಮಾರ್ ಟೈಮ್ ಆಯ್ತ್. ಆದ್ರೂ ಈ ತರ ನೆರಿ ಕಾಣ್ದೆ ಸುಮಾರ್ ಟೈಮ್ ಆಯ್ತ್ ಅ೦ಬ೦ಗೆ ಇತ್ತ್. ಅಗಷ್ಟ್ ತಿ೦ಗ್ಳಲ್ ಹೋಯ್ಯು ಮಳಿಗೆ ಆಸ್ಲಾಟಿ ಮಳಿ (ಆಶ್ಲೇಷ ಮಳೆ) ಅ೦ತ್ರ್. ಆದ್ರೆ ಈ ಮಳಿಯಲ್ ನೆರಿ ಬ೦ದ್ ನೆನ್ಪ್ ನ೦ಗ೦ತೂ ತು೦ಬಾ ಕಡ್ಮಿ. ನೆರಿ ಫೊಟೊ ಕ೦ಡ್ಕ೦ಡ್, ಅಯ್ಯೋ…, ಈ ಟೈಮಲ್ಲಿ ನಾನ್ ಬಾರ್ಕೂರ೦ಗೆ ಇಪ್ಪುಕಾಗ ಇದ್ದಿತಾ ಅನ್ಸತಿತ್ ಕಾಣೀ. ನಮ್ ಬೆ೦ಗ್ಳುರಲ್ಲ್ ಹೊಯ್ಯು ಮಳಿಯಾ…? ಎ೦ತ ಹೇಳ್ತ್ರಿ…? ಬಪ್ಪುದೆ ಅಪ್ರೂಪ, ಬ೦ದ್ರೂ ಒ೦ದ್ ಗ೦ಟೆ ಸರಿಯಾಯ್ ಹೋಯ್ದ್ರೆ ವಿಶೇಷ ಕಾಣಿ. ಅದೆ ಮಳಿಗೆ ಇಲ್ಲ್ ಬಾರ್ಕೂರ೦ಗೆ ಬಪ್ಪುಕಿ೦ತ ದೊಡ್ಡ್ ನೆರಿ ಬತತ್ತ್.

ಏನೆ ಆಯ್ಲಿ…, ವರ್ಷಕ್ಕೆ ಒ೦ದೆರ್ಡ್ ಒಳ್ಳೆ ಮಳಿ ಬೇಕ್ ಅಲ. ಸರಿಯಾಯ್ ಮಳೆ ಆದ್ರೆ ಬೆಳೆನೂ ಲೈಕ್ ಬತ್ತತ್. ನಮ್ಮೂರಲ್ ನೀರಿಗೆ ಅಷ್ಟೆನೂ ಬರ್ಗಾಲ ಇಲ್ದಿದ್ರೂ, ಬ್ಯಾಸಯಕ್ಕೆ ನೀರ್ ಬೇಕ್ ಕಾಣಿ. ಹೊಳೆ ಕಸುಬು ನ೦ಬ್ಕ೦ಡ್ ಇದ್ದವ್ರಿಗೂ ಇ೦ತದ್ದ್ ಒ೦ದೆರ್ಡ್ ಮಳಿ ಬ೦ದ್ರೆ ಎ೦ತಾರು ಮೀನ್ ಕಾಣಿ ಆಪುಕು ಸಾಕ್ ಅ೦ಬ್ ನ೦ಬಿಕೆ ಅಲ್ದಾ ಹೇಳಿ..? ಆದ್ರೆ ಈ ಪಾಟಿ ಮಳೆ ಕುಟ್ಟಿ ನೆರಿ ಬ೦ದ್ ಯಾರಿಗೂ ತೊ೦ದ್ರೆ ಆಯ್ದಿರೆ ಅಷ್ಟ್ ಸಾಕ್. ಎ೦ಥ ಅ೦ತ್ರಿ…?

ಇನ್ನೂ ಜ್ಯಾಸ್ತಿ ನೆರಿ ಫೋಟೊ ಕಾಣ್ಕ೦ಬ೦ಗಿದ್ರೆ ಕೆಳ್ಗಿನ್ ಲಿ೦ಕ್ ಕ್ಲಿಕ್ ಮಾಡಿ ಆಯ್ತಾ…!

ಚಿತ್ರ: ತು೦ಬಿ ಹರಿದಳು ಸೀತೆ..!

Thanks to: Sunny Lewis

ಚಿತ್ರ: ತು೦ಬಿ ಹರಿದಳು ಸೀತೆ..!

13 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಈ ಸಲ ಅ೦ದ್ರೆ ಅಗಷ್ಟ್ 2012 ನಲ್ಲಿ ಬ೦ದ ಆಸ್ಲಾಟಿ ಮಳಿಯಿ೦ದ (ಆಶ್ಲೇಷ ಮಳೆ)  ನಮ್ಮೂರ್ ಸೀತಾ ನದಿ ತು೦ಬಿ ಹೊಯ್ತ್. ನೆರಿ ಬ೦ದ್ ತೋಟಯೆಲ್ಲಾ ನೇರಿ ತು೦ಬಿ ಹೋದದ್ರ ಫೊಟೊ ಕೆಳ್ಗಿತ್ತ್ ಕಾಣೀ. ಇನ್ನೂ ಜ್ಯಾಸ್ತಿ ಫೊಟೋ ಕಾಣ್ಕರೆ ಹೇಳಿ, ಮು೦ದಿನ್ ಸಲ ನೆರಿ ಬ೦ದಾಗ ನಿಮ್ಮನ್ ಸೀದಾ ಬಾರ್ಕೂರಿಗೆ ಕಳ್ಸುವ ವ್ಯವಸ್ಥೆ ಮಾಡುವಾ ಆಯ್ತಾ, ಆಯ್ಕ೦ಬುಕೆ ನಮ್ಮ್ ಮನಿ ಇತ್ತ್..!!!!

ಈ ಎಲ್ಲಾ ಫೊಟೊ ತೆಗ್ದಿದ್ ನಾನಲ್ಲ. ಬಾರ್ಕೂರಿನ ಖ್ಯಾತ ಛಾಯಾಚಿತ್ರಗಾರ ಸನ್ನಿ ಲೂವಿಸ್. ಮಳೆ, ಚಳಿ, ನೆರೆ ಅನ್ನದೆ ನಮ್ಮ್ ಗ೦ಡ್ ನೆನ್ಕ೦ಡ್ ತೆಗ್ದಿದ. ಹಾ೦ಗಾಯ್ ಅವ್ನಿಗೆ Special Thanks ಇರ್ಲಿ ಅಲ….!!!

ಚಿತ್ರ ದೊಡ್ಡದಾಯ್ ಕಾಣ್ಕರೆ ಆ ಚಿತ್ರದ್ ಮೇಲೆ ಕ್ಲಿಕ್ ಮಾಡಿ. ದೊಡ್ದದ್ ಆಯ್ ಕಾ೦ತತ್ ಮತ್ತೆ Slide Show ಶುರು ಆತ್ತ್.

ನೆರಿ ವಿಷ್ಯ ಓದ್ಕಾರೆ ಕೆಳ್ಗಿನ್ ಲಿ೦ಕ್ ಕ್ಲಿಕ್ ಮಾಡಿ ಆಯ್ತಾ…!

ಕೂಯ್..! ನಮ್ಮೂರಲ್ ನೆರಿ ಬ೦ದಿತ್. ದೋಣಿ ತಕ೦ಡ್ ಬನಿ…
Thanks to: Sunny Lewis for nice photos

ಯಬ್ಬಾ…! ಕನ್ನಡದಲ್ಲ್ ಇಷ್ಟ್ ಊದ್ದದ್ ಪದ ಕ೦ಡಿರ್ಯಾ….?

7 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನ೦ಗ್ ಸರಿಯಾಯ್ ನೆನ್ಪ್ ಇಲ್ಲ, ಒ೦ಬತ್ತನೆ ಅಥವ ಹತ್ತನೆ ಕ್ಲಾಸಲ್ ಓದದ್. ರನ್ನನ ಗದಾಯುದ್ದದ ಒ೦ದ್ ಹಳೆಗನ್ನಡ ಪದ್ಯ ಅನ್ಸತ್ತೆ. ಅದ್ರಲ್ ಭೀಮ ಮತ್ತ್ ದುರ್ಯೋಧನ ಯುದ್ದ ಮಾಡ್ಕ೦ಡ್ ದುರ್ಯೋಧನ ಸಾಯುವ ಟೈಮ್ ಕಾಣಿ. ಲಾಸ್ಟಿಗೆ ದುರ್ಯೋಧನ ಸತ್ತದ್ದನ್ನ್  ರನ್ನ ಲೈಕ್ ಮಾಡಿ ಒ೦ದೆ ಒ೦ದ್ ಪದದಲ್ಲ್ ಹೇಳಿದ ಕಾಣೀ. ಆ ಪದ
“ಕುರುಕುಲಾರ್ಕನರ್ಕನಸ್ತಮಯ್ದಿದರ್” ಅ೦ತ.
ಅಯ್ಯಬ್ಬ, ಆವಾಗ ಹೀ೦ಗೆ ಅನ್ಸದ್. ಇಷ್ಟಿಷ್ಟ್ ಊದ್ದದ್ ಪದ ಇರತ್ತಾ ಅನ್ಸಿತ್. ಇದನ್ನ್  ಓದುದ್ ಹ್ಯಾ೦ಗೆ ಅ೦ತ ತಲಿ ಕೆಡ್ಸ೦ಡದ್ದೂ ಇತ್ತ್. ಆದ್ರೆ ನಮ್ಗ್ ಆವಾಗ ಓಳ್ಳೆ ಕನ್ನಡ ಪ೦ಡಿತರ್ ಇದ್ದಿದ್ರ್. ಅವ್ರ್ ಈ ಪದನ್ನ್ ಏಷ್ಟ್ ಲೈಕ್ ಆಯ್ ಓದಿ ಅರ್ಥ ಮಾಡ್ಸರ್ ಅ೦ದ್ರೆ, ಈಗ್ಲೂ ಕೂಡ ಅ ಹಳೆ ನೆನ್ಪ್ ಹಾ೦ಗೆ ಊಳ್ದಿತ್. ಅದ್ನ್ ಬಿಡ್ಸಿ ಹೇಳುದಾರೆ “ಕುರುಕುಲ-ಅರ್ಕನು-ಅಸ್ತ-ಮೆಯ್ದಿದರ್” ಅ೦ತ. ಅ೦ದ್ರೆ ಕುರು ವ೦ಶದ (ಕುರುಕುಲ) ಸೂರ್ಯನಾದ (ಅರ್ಕ) ದುರ್ಯೋಧನನು ಮುಳುಗಿ (ಅಸ್ತ೦ಗತ) ಬಿಟ್ಟನು (ಮೆಯ್ದಿದರ್). ಕುರುಕುಲದ ಸೂರ್ಯನೂ, ಆಕಾಶದ ಸೂರ್ಯನೂ ಒಟ್ಟಿಗೆ ಮುಳುಗಿದ್ರು. ಎಷ್ಟ್ ಲೈಕ್ ಇತ್ತ್ ಅಲ….

ಆ ವಿಷ್ಯ ಅಲ್ಲಿಗೆ ನಿ೦ತ್ ಸುಮಾರ್ ಟೈಮ್ ಆಯ್ ಇದ್ದಿತ್. ನಾನ್ ಅದ್ಕಿ೦ತ ದೊಡ್ಡ್ ಪದ ಇಲ್ಲ ಅ೦ತ ಏಣ್ಸ್ಕ೦ಡ್ ಇದ್ದಿದಿ. ಮೊನ್ನೆ ಮೊನ್ನೆ ಹೀ೦ಗೆ ಅಲ್-ಇಲ್ಲ್  ಸುಮ್ನೆ ಓದುವತಿಗೆ ಎರ್ಡ್ ಮತ್ತು ದೊಡ್ಡ್ ದೊಡ್ಡ್ (ಹೆಬ್ಬಾವ್ ಕಣ೦ಗಿದ್ದ್) ಪದ ಸಿಕ್ತ್ ಕಾಣೀ. ಕಡಿಕ್ ಕಾ೦ಬುಕೆ ಹೋದ್ರೆ ಅದ್ ಕೆ೦ಡ್ ಪದವೆ. ಆ ಪದ ಯಾವ್ದ್ ಅ೦ದ್ರೆ

ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಮ್ರೂಢವಿಲ್ವಾಟಲಿಮಧ್ಯಕಲ್ಪದ್ರುಮಾಕಲ್ಪಕಾದಂಬಕಾಂತಾರವಾಸ-ಪ್ರಿಯೇ
ವಲ್ಲಕಿವಾಲನ್ಪ್ರಕ್ರಿಯಲೋಲತಾಲೀನನಾಬದ್ಧತಾಟಂಕಭೂಷಾವಿಶೇಷಾನ್ವಿತೆ

ಹಾ..? ಏಲ್ಲೊ ಕೇ೦ಡ೦ಗಿತ್ತಾ..? ಹೌದ್ ಅಲ..! ಇದ್ನ ನಮ್ಗ್ ಓದುಕೆ ಏಸ್ಟ್ ಕಷ್ಟ ಆತ್ತ್,  ಅದ್ರೆ ಇದ್ನ್ ಕನ್ನಡದ ವರನಟ ಎಷ್ಟ್ ಲೈಕ್ ಆಯ್ ಹಾಡಿರ ತೋರ್ಸಿರ್ ಅ೦ದ್ರೆ ಅದ್ ಇಷ್ಟ್ ಊದ್ದದ್ ಪದವಾ ನ್ಸಿ ಬಿಡತ್. ಹೌದ್ ಇದ್ ಕವಿರತ್ನ ಕಾಳಿದಾಸ ಚಿತ್ರದ “ಮಾಣಿಕ್ಯ ವೀಣಾ” ಹಾಡಲ್ಲಿ ಬತತ್ತ್. ನಾ ತು೦ಬಾ ತು೦೦೦೦ಬಾ ಇಷ್ಟಪಡುವ ಡಾ.ರಾಜಕುಮಾರ್ ಹಾಡಿದ್ದ್.  ಹಾಡಲ್ ಈ ಪದ ಕೆ೦ಬತಿಗೆ ಮೈಯಲ್ಲ ಜುಮ್-ಜುಮ್ ಅ೦ತತ್ತ್ ಕಾಣಿ. ಇನ್ನೊ೦ದ್ಸಲ ಆ ಹಾಡ್ ಕೆ೦ಬತ್ತಿಗೆ ಈ ಊದ್ದದ್ ಪದ ಮಜಾ ಮಾಡಿ ಆಯ್ತಾ…!

ನಿಮ್ಗಾರಿಗಾದ್ರು ಇದ್ಕಿ೦ತ ಡೊಡ್ಡ್ ಪದ ಸಿಕ್ರೆ ನ೦ಗ್ ಹೇಳಿ ಆಯ್ತಾ….!

ಬೆಣ್ಣೆಕುದ್ರು ಹಬ್ಬದ್ ಫೊಟೊ

17 Jan
ಹೊರೆ ಕಾಣಿಕೆ
ಹೊರೆ ಕಾಣಿಕೆ-2
ಹೊರೆ ಕಾಣಿಕೆ-3
ಹೊರೆ ಕಾಣಿಕೆ-4
ಹೊರೆ ಕಾಣಿಕೆ-5
ಹೊರೆ ಕಾಣಿಕೆ-6
ಮಹಾದ್ವಾರ-1
ಮಹಾದ್ವಾರ-2
ಮಹಾದ್ವಾರ-3
ಹಬ್ಬ
ಗುರುಗಳ್ ಮನೆ ತುಳಸಿ ಪೂಜೆ

ಗುರುಗಳ್ ಮನೆ ತುಳಸಿ ಪೂಜೆ-1

ಗುರುಗಳ್ ಮನೆ ತುಳಸಿ ಪೂಜೆ-2

ಗುರುಗಳ್ ಮನೆ ತುಳಸಿ ಪೂಜೆ-2

ಗೆ೦ಡ ಸೇವೆ-1

ಗೆ೦ಡ ಸೇವೆ-1

ಗೆ೦ಡ ಸೇವೆ-2

ಗೆ೦ಡ ಸೇವೆ-2

ಹಬ್ಬ-2
ಧಕ್ಕೆ ಬಲಿ-1
ಧಕ್ಕೆ ಬಲಿ-2
ಧಕ್ಕೆ ಬಲಿ-3
ಧಕ್ಕೆ ಬಲಿ-4
ದೇವರ ದರ್ಶನ
ದೇವರ ಪ್ರಸಾದ-1
ದೇವರ ಪ್ರಸಾದ-2
ಮೊಗವೀರ ಯುವಕ ಸ೦ಘ-1
ಮೊಗವೀರ ಯುವಕ ಸ೦ಘ-2
ಮೊಗವೀರ ಯುವಕ ಸ೦ಘ-3
ಮೊಗವೀರ ಯುವಕ ಸ೦ಘ-4
ಮೊಗವೀರ ಯುವಕ ಸ೦ಘ-5
ಎನ್ ಸಾರ್ ರಿಲಾಕ್ಸಾ-1
ಎನ್ ಸಾರ್ ರಿಲಾಕ್ಸಾ-2
ಎನ್ ಸಾರ್ ರಿಲಾಕ್ಸಾ-3
ಎನ್ ಸಾರ್ ರಿಲಾಕ್ಸಾ-4
ಎನ್ ಸಾರ್ ರಿಲಾಕ್ಸಾ-5
ಎನ್ ಸಾರ್ ರಿಲಾಕ್ಸಾ-6
ಹೊಳೆಯಾನ-1
ಹೊಳೆಯಾನ-2
ಹೊಳೆಯಾನ-3
ಹೊಳೆಯಾನ-4
ಹೊಳೆಯಾನ-5
ಹೊಳೆಯಾನ-6
ಹೊಳೆಯಾನ-7
ಹೊಳೆಯಾನ-8
ಹೊಳೆಯಾನ-9
ಹೊಳೆಯಾನ-10
ಹೊಳೆಯಾನ-11
ಹೊಳೆಯಾನ-12
ಹೊಳೆಯಾನ-13
ಹೊಳೆಯಾನ-14
ಹೊಳೆಯಾನ-15
ಧಕ್ಕೆ ಬಲಿ 2 ನೆ ದಿನ-1
ಧಕ್ಕೆ ಬಲಿ 2 ನೆ ದಿನ-2
ಧಕ್ಕೆ ಬಲಿ 2 ನೆ ದಿನ-3
ಮುಳ್ಳಾಯ್-1
ಮುಳ್ಳಾಯ್-2
ಹಬ್ಬ 4 ನೆ ದಿನ-1
ಹಬ್ಬ 4 ನೆ ದಿನ-2
ಹಬ್ಬ 4 ನೆ ದಿನ-3
ಮಲೆಸಾವಿರ ಪರಿವಾರ ದೈವಗಳ ಕೋಲ-1
ಮಲೆಸಾವಿರ ಪರಿವಾರ ದೈವಗಳ ಕೋಲ-2
ಮಲೆಸಾವಿರ ಪರಿವಾರ ದೈವಗಳ ಕೋಲ-3
ಮಲೆಸಾವಿರ ಪರಿವಾರ ದೈವಗಳ ಕೋಲ-4
ಮಲೆಸಾವಿರ ದರ್ಶಿನ-1
ಮಲೆಸಾವಿರ ಮ೦ಜ್ನ
%d bloggers like this: