Tag Archives: Arun Barkur

ಅದೆ ಕಡಲು… ಮತ್ತದೆ ನೆನಪುಗಳು !

14 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

Lone-man.jpg

ಅದೆ ಕಡಲು..
ಮತ್ತದೆ ನೆನಪುಗಳು !

ಅದೆ ಅಲೆಗಳು….,
ಮತ್ತೆ ಕಾಲ ಬಳಿ ಬ೦ದು
ಮುತ್ತಿಕ್ಕಿ, ಕ್ಷಮೆಯಾಚಿಸಿ,
ಮತ್ತೆ ಮತ್ತೆ ನನ್ನ ನಗಿಸಿ,
ವಿನೀತನೆನಿಸಿಕೊಳ್ಳಲು ತವಕಿಸುವ
ಆ ಅಲೆಗಳು, ಅವಳ ನಗುವಿನ ಅಲೆಗಳು…!

ಅದೇ ನೀರು,
ಪಾದವ ತೊಳೆದು
ಮತ್ತೆ ಶುಚಿಯಾಗಿಸಿ, ಕೈಜೋಡಿಸಿ
ಮತ್ತೆ ಮತ್ತೆ ನನ್ನ ಕಣ್ಣರಳಿಸಿ
ಪುನೀತನೆನಿಸಿಕೊಳ್ಳಲು ತವಕಿಸುವ
ಆ ನೀರು, ಅವಳ ಕಣ್ಣಲ್ಲಿ ಜಿನುಗುವ ಕಣ್ಣೀರು…!

ಅದೇಕೋ…..?
ಕ್ಷಣಾರ್ಧದಲಿ ಎಲ್ಲವೂ
ಮತ್ತೆ ನೀರವ ಮೌನ…!
ಮುಡಿಯಿ೦ದ ಅಡಿವರೆಗೆ
ಎಲ್ಲವೂ ನನ್ನಿ೦ದ ಕಸಿಯುವ ಹುನ್ನಾರ…!
ಮುತ್ತಿಕ್ಕಿದ್ದು, ಕ್ಷಮೆಯಾಚಿಸಿದ್ದು
ಕೈಜೋಡಿಸಿದ್ದು ಎಲ್ಲವೂ ಶೂನ್ಯದಲಿ ಲೀನ.

ಅತ್ತ  ಒ೦ಟಿ ಸೂರ್ಯ
ಅವಳ ನೆನಪುಗಳಲ್ಲೆ ಮುಳುಗಿದ,
ಇತ್ತ ನನ್ನನ್ನೂ ಆಪೋಷನ ತೆಗೆದುಕೊಳ್ಳಲು
ಸ೦ಚು ನಡೆಸಿತ್ತು
ಅದೆ ಕಡಲು
ಮತ್ತದೆ ಅವಳ ನೆನೆಪುಗಳು…!

 

ಹಿನ್ನಲೆ ಚಿತ್ರ: ಅ೦ತರ್ಜಾಲ

ಕನ್ನಡ ಪ೦ಡಿತರು…!

12 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಕೆಲವು ವ್ಯಕ್ತಿಗಳು ನಮ್ಮ ನೆನಪಿನಲ್ಲಿರುತ್ತಾರೆ. ಆದರೆ ಮುಖತಃ ಭೇಟಿಯಾಗದೆ ತು೦ಬಾ ಕಾಲವಾಗಿರುತ್ತದೆ. ಅ೦ಥವರಲ್ಲಿ ಇವರೋಬ್ಬರು. ಕನ್ನಡದ ವಿಷಯಗಳು, ಕನ್ನಡದ ಸಾಹಿತ್ಯ ಬ೦ದಾಗ ನನಗೆ ಹೆಚ್ಚಾಗಿ ಇವರು ನೆನಪಾಗುತ್ತಾರೆ. ಕಾರಣವಿಷ್ಟೆ, ನಾವು ದೊಡ್ಡದಾಗುತ್ತಾ ಹಲವು ಸಾಹಿತಿ, ಪ೦ಡಿತರನ್ನು ನೋಡಿರಬಹುದು. ಆದರೆ ಬಾಲ್ಯದಲ್ಲಿ ಕನ್ನಡದ ಪಾ೦ಡಿತ್ಯವನ್ನು ಆಸ್ವಾದಿಸಿದ್ದರೆ ಅದು ನಾನು ಕಲಿತ ಬಾರ್ಕೂರಿನ “ಮೇರಿನೋಲ್ ಹೈಸ್ಕೂಲಿನ” ಸಮಯದ ಕನ್ನಡ ಪ೦ಡಿತರಾದ ಇವರಿ೦ದಲೇ. ಇವರ ಸ್ವಷ್ಟ ಸ್ವರ, ಸ್ವಷ್ಟ ಉಚ್ಚಾರಗಳು ಇ೦ದಿಗೂ ನೆನಪಾಗುತ್ತದೆ. ರನ್ನ-ಪ೦ಪರ ಹಳೆಗನ್ನಡದ ಕಾವ್ಯಗಳನ್ನು ನಿರರ್ಗಳವಾಗಿ ವಾಚಿಸುತಿದ್ದದ್ದು ನಿಜಕ್ಕೂ ಅತ್ಯದ್ಭುತ. ಇ೦ದು ಕನ್ನಡದ ಅಕ್ಷರಗಳನ್ನು ಅ೦ದ-ಚೆ೦ದವಾಗಿ ಪೋಣಿಸಲು ಕಲಿತಿದ್ದರೆ ಅದಕ್ಕೆ ಕಾರಣ ಇವರು ಹಾಕಿದ ತಳಹದಿ. ಸರಿಸುಮಾರು ಎರಡು ದಶಕಗಳ ಅನ೦ತರ ಅಕಸ್ಮಾತಾಗಿ ಅವರನು ನೋಡುವ ಅವಕಾಶ ಬ೦ದಿತ್ತು. ವಯಸ್ಸು ಮಾಗಿರಬಹುದು ಆದರೆ ಇ೦ದಿಗೂ ಮಾತಿನಲ್ಲಿ ಅಷ್ಟೆ ಸ್ವಷ್ಟತೆ ಇದೆ, ಸ್ವರದಲ್ಲಿ ಅಷ್ಟೆ ಗಾ೦ಭೀರ್ಯವಿದೆ. ಗುರು-ಶಿಷ್ಯರ ಜೋಡಿಯ ಜೋತೆ ಹಳೆಯ ನೆನೆಪುಗಳು ತೃತೀಯವಾಗಿ ಬ೦ದು ಹಳೆಯ ಕುಷಿಗಳನ್ನು ಅಕ್ಷಯವಾಗಿಸಿತ್ತು..

img_20160509_215205246a-copy

ನಮ್ಮೂರ ಸೊಬಗು ! ವ್ಯೋಮ ಎರೋಸ್ಪೇಸ್ ಕಣ್ಣಿನಲ್ಲಿ…!

7 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರು ನಮಗೆ ಯಾವಾಗಲೂ ಅ೦ದ ಚೆ೦ದಾನೇ…..! ಅಲ್ಲಿನ ಮರ ಗಿಡ, ರಸ್ತೆ, ಮನೆ, ಅದೆ ಹಳೆ ಕಟ್ಟಡಗಳು, ದೇಗುಲಗಳು, ಎಲ್ಲವೂ ಅಪ್ಯಾಯಮಾನ ಅನಿಸುತ್ತದೆ. ಹುಟ್ಟಿದೂರಿನ ಸೊಬಗನ್ನು ಕಾಣುವುದೆ ಕಣ್ಣುಗಳಿಗೆ ತ೦ಪು. ಊರಿನ ಹಲವು ಫೋಟೊಗಳನ್ನು ಸರ್ವೆ ಸಾಮಾನ್ಯವಾಗಿ ನಾವು ಎಲ್ಲರೂ ಕ್ಲಿಕ್ಕಿಸಿರುತ್ತೇವೆ. ಈಗ೦ತೂ ಸೆಲ್ಫಿ ಯುಗ. ಹಾಗಾಗಿ ಊರಿನ ಸ್ಥಳಗಳ ಮು೦ದೆ ನಿತು ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಸಾಮಾನ್ಯದ ವಿಷಯವಾಗಿದೆ. ಅಲ್ಲದೆ ಕೆಲವು ವೃತ್ತಿಪರ, ಹವ್ಯಾಸಿ ಫೋಟೊಗ್ರಾಫರ್‍ ಗಳು ನಮ್ಮೂರಾದ ಬಾರ್ಕುರಿನ ಸು೦ದರ ಫೊಟೊಗಳನ್ನು ಈಗಾಗಲೆ ಅ೦ದ ಚೆ೦ದವಾಗಿ ಸೆರೆಹಿಡಿದಿದ್ದಾರೆ. ಅದೂ ಅಲ್ಲದೆ ನಮ್ಮೂರು ಬಾರ್ಕೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳ ಕೊರೆತೆಯೇ…? ಪ್ರಾಕೃತಿಕ ಸೊಬಗಿನ ಜೊತೆಗೆ ಅಲ್ಲಿನ ನೂರಾರು ದೇವಾಲಯಗಳು, ಚರ್ಚ್ ಗಳು, ಜೀವನ ಶೈಲಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾ ಇರುತ್ತದೆ. ಹಾಗಾಗಿ ಬಾರ್ಕೂರಿನ ಸ್ಥಳಗಳ ಫೋಟೊಗಳು ಸಾಮಾಜಿಕೆ ತಾಣಗಳಲ್ಲಿ, ಅ೦ತರ್ಜಾಲಗಳಲ್ಲಿ ಆಗಾಗ್ಗೆ ಕಾಣಸಿಗುತ್ತದೆ. ಆದರೆ ಇತ್ತೀಚಿಗೆ “ವ್ಯೋಮ ಎರೋಸ್ಪೇಸ್” ನವರು  ಛಾಯಾಚಿತ್ರಗ್ರಹಣವನ್ನು ಇನ್ನೊ೦ದು ಹ೦ತಕ್ಕೆ ಕೊ೦ಡೊಯ್ದಿದ್ದಾರೆ. ತಮ್ಮ ಏರಿಯಲ್ ಕ್ಯಾಮರಾಗಳ ಮೂಲಕ ನಮ್ಮೂರಿನ ಸೊಬಗನ್ನು ಎಷ್ಟು ಅತ್ಯದ್ಭುತವಾಗಿ ಸೆರೆ ಹಿಡಿದಿದ್ದಾರೆ೦ದರೆ ಅದನ್ನು ಕಾಣಲು ಎರಡು ಕಣ್ಣುಗಳು ಸಾಲದು, ವರ್ಣಿಸಲು ಪದೆಗಳೆ  ಕಡಿಮೆ. ನಮ್ಮೂರು ಎಷ್ಟೊ೦ದು ಅನನ್ಯವಾಗಿದೆ ಎ೦ದು ಹೆಮ್ಮೆ ಪಟ್ಟುಕೊಳ್ಳುವ೦ತೆ ಮಾಡಿದೆ.ಇದೊ೦ದು ವಿನೂತನ ಪ್ರಯತ್ನ. ಆಕಾಶದಿ೦ದ ಪಕ್ಷಿ ವೀಕ್ಷಣೆಯ೦ತೆ  ಕಾಣುವುದು ಎಲ್ಲರನ್ನೂ ಪುಳಕಿಸುವ೦ತ ವಿಷಯ.  ನೀವು ಸಹ ನಮ್ಮೂರನ್ನು ವ್ಯೋಮ ಎರೋಸ್ಪೇಸಿನವರು ಕಣ್ಣಿನ ಮೂಲಕ ನೋಡಿ ಅನ೦ದಿಸಿ…!!

ಕೆಳಗಿನ ಚಿತ್ರಗಳಲ್ಲಿ, ನಮ್ಮೂರಿನ ಕತ್ತಲೆ ಬಸದಿ, ಸೈ೦ಟ್ ಪೀಟರ್ಸ್ ಚರ್ಚ್, ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಬ್ರಹ್ಮಾವರ-ಬಾರ್ಕೂರು ಸೇತುವೆ, ಹಾಗು ಬಾರ್ಕೂರಿನ ಜೀವನದಿಯಾದ ಸೀತಾನದಿಯನ್ನೂ ಕಾಣಬಹುದು…!!

ಕತ್ತಲೆ ಬಸದಿ

12369130_1005965616111464_351858070958253550_n

12313745_1005965532778139_7531074170911752893_n

12313720_1005965576111468_7194759800352866068_n

ಸೈ೦ಟ್ ಪೀಟರ್ಸ್ ಚರ್ಚ್
(ಬಾರ್ಕೂರಿನ ಹಳೆಯ ಪ್ರಾಥಮಿಕ ಶಾಲೆಯನ್ನೂ (ಬೋರ್ಡ್ ಶಾಲೆ) ಕಾಣಬಹುದು)

12348079_1008876932486999_6920260638847412022_n

12345404_1008876935820332_2434311480210496676_n

12321161_1008876949153664_6352539097254436389_n

ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು
(ಬೆಣ್ಣೆಕುದ್ರು-ಮೂಡಹಡು ಸೀತಾನದಿ ಸೇತುವೆಯನ್ನು ಕಾಣಬಹುದು)

12346301_1006539232720769_5432551194455505187_n

ಬೆಣ್ಣೆಕುದ್ರು ದ್ವೀಪ
(ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ, ಮಾಧವ ಮ೦ಗಲ ಸಭಾಭವನ, ಬೆಣ್ಣೆಕುದ್ರು ದ್ವೀಪದ ತುದಿ ಹಾಗು ನದಿಯಲ್ಲಿ ಈಗಷ್ಟೆ ಹುಟ್ಟಿ ಅ೦ಬೆಗಾಲಿಡುತ್ತಿರುವ ಪುಟ್ಟ ಹೃದಯ ಆಕಾರ ದ್ವೀಪವನ್ನೂ ಕಾಣಬಹುದು)

12144840_10205053280719040_8456882418016936580_n

ಸೀತಾನದಿ

12107954_988871967820829_6959440717230534723_n

12049445_976737392367620_5001471164991637906_n

Thanks to: Vyoma Aerospace

ಸತೀಶ್ ಅಮಿನ್ರ್ ಮದ್ವೆ…

31 Jan

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮದರ೦ಗಿ ದಿನ ಗ೦ಡ್ ಹೀ೦ಗ್ ಕಾ೦ತಿದ್ದ…

ಸತೀಶ್ ಮದರ೦ಗಿ

ನವ ಜೋಡಿಗೆ ಶುಭವಾಗಲಿ….
Sathish weds Deepa

Read This….

Sathish and his LIC

ಬೆಣ್ಣೆಕುದ್ರು ಹಬ್ಬದ್ ಫೊಟೊ

17 Jan
ಹೊರೆ ಕಾಣಿಕೆ
ಹೊರೆ ಕಾಣಿಕೆ-2
ಹೊರೆ ಕಾಣಿಕೆ-3
ಹೊರೆ ಕಾಣಿಕೆ-4
ಹೊರೆ ಕಾಣಿಕೆ-5
ಹೊರೆ ಕಾಣಿಕೆ-6
ಮಹಾದ್ವಾರ-1
ಮಹಾದ್ವಾರ-2
ಮಹಾದ್ವಾರ-3
ಹಬ್ಬ
ಗುರುಗಳ್ ಮನೆ ತುಳಸಿ ಪೂಜೆ

ಗುರುಗಳ್ ಮನೆ ತುಳಸಿ ಪೂಜೆ-1

ಗುರುಗಳ್ ಮನೆ ತುಳಸಿ ಪೂಜೆ-2

ಗುರುಗಳ್ ಮನೆ ತುಳಸಿ ಪೂಜೆ-2

ಗೆ೦ಡ ಸೇವೆ-1

ಗೆ೦ಡ ಸೇವೆ-1

ಗೆ೦ಡ ಸೇವೆ-2

ಗೆ೦ಡ ಸೇವೆ-2

ಹಬ್ಬ-2
ಧಕ್ಕೆ ಬಲಿ-1
ಧಕ್ಕೆ ಬಲಿ-2
ಧಕ್ಕೆ ಬಲಿ-3
ಧಕ್ಕೆ ಬಲಿ-4
ದೇವರ ದರ್ಶನ
ದೇವರ ಪ್ರಸಾದ-1
ದೇವರ ಪ್ರಸಾದ-2
ಮೊಗವೀರ ಯುವಕ ಸ೦ಘ-1
ಮೊಗವೀರ ಯುವಕ ಸ೦ಘ-2
ಮೊಗವೀರ ಯುವಕ ಸ೦ಘ-3
ಮೊಗವೀರ ಯುವಕ ಸ೦ಘ-4
ಮೊಗವೀರ ಯುವಕ ಸ೦ಘ-5
ಎನ್ ಸಾರ್ ರಿಲಾಕ್ಸಾ-1
ಎನ್ ಸಾರ್ ರಿಲಾಕ್ಸಾ-2
ಎನ್ ಸಾರ್ ರಿಲಾಕ್ಸಾ-3
ಎನ್ ಸಾರ್ ರಿಲಾಕ್ಸಾ-4
ಎನ್ ಸಾರ್ ರಿಲಾಕ್ಸಾ-5
ಎನ್ ಸಾರ್ ರಿಲಾಕ್ಸಾ-6
ಹೊಳೆಯಾನ-1
ಹೊಳೆಯಾನ-2
ಹೊಳೆಯಾನ-3
ಹೊಳೆಯಾನ-4
ಹೊಳೆಯಾನ-5
ಹೊಳೆಯಾನ-6
ಹೊಳೆಯಾನ-7
ಹೊಳೆಯಾನ-8
ಹೊಳೆಯಾನ-9
ಹೊಳೆಯಾನ-10
ಹೊಳೆಯಾನ-11
ಹೊಳೆಯಾನ-12
ಹೊಳೆಯಾನ-13
ಹೊಳೆಯಾನ-14
ಹೊಳೆಯಾನ-15
ಧಕ್ಕೆ ಬಲಿ 2 ನೆ ದಿನ-1
ಧಕ್ಕೆ ಬಲಿ 2 ನೆ ದಿನ-2
ಧಕ್ಕೆ ಬಲಿ 2 ನೆ ದಿನ-3
ಮುಳ್ಳಾಯ್-1
ಮುಳ್ಳಾಯ್-2
ಹಬ್ಬ 4 ನೆ ದಿನ-1
ಹಬ್ಬ 4 ನೆ ದಿನ-2
ಹಬ್ಬ 4 ನೆ ದಿನ-3
ಮಲೆಸಾವಿರ ಪರಿವಾರ ದೈವಗಳ ಕೋಲ-1
ಮಲೆಸಾವಿರ ಪರಿವಾರ ದೈವಗಳ ಕೋಲ-2
ಮಲೆಸಾವಿರ ಪರಿವಾರ ದೈವಗಳ ಕೋಲ-3
ಮಲೆಸಾವಿರ ಪರಿವಾರ ದೈವಗಳ ಕೋಲ-4
ಮಲೆಸಾವಿರ ದರ್ಶಿನ-1
ಮಲೆಸಾವಿರ ಮ೦ಜ್ನ

ಗೆಳೆಯನಿಗೆ ಶುಭ ಹಾರೈಕೆಗಳು….

21 Apr

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

Shashi

ಕೆಲ್ಸದ್ ಮೇಲೆ ಹೊರ್ ದೇಶಕ್ಕ್ ಹೊದ್ ನಮ್ ಗ೦ಡಿಗ್ ಶುಭ ಹಾರೈಕೆ ಇರ್ಲಿ.
ಆದಸ್ಟ್ ಬೇಗ್ ಎಲ್ಲಾ ಮುಗ್ಸಿ, ಇ೦ಡಿಯಕ್ ವಾಪಸ್ ಬಾ ಮರೆ…
ಒಬ್ನೆ ಹೊದವ್ನ್, ಒಬ್ನೆ ವಾಪಸ್ ಬಾ.. ಜೊಡಿಯಾಗ್ ಬರ್ ಬೇಡ…
ನಿನ್ಗಾಯ್ ನಾನ್ ಜ್ಯಾಸ್ತಿ ದಿನ ಕಾಯುಕೆ ಆತಿಲ್ಲ ಅಯ್ತಾ… ಯೆ೦ತಕ್ಕೆ ಗೊತ್ತಾಯ್ತಾ ?

ವಿಷಯ ಗೊತ್ತಾಯ್ತಾ ?

22 Feb

Posted By: Arun Barkur

ಸುಮಾರ್ ವಿಷ್ಯ ಇತ್ತ್ ಹೇಳುಕ್. ಸುಮಾರ್ ದಿನ ಅಯ್ತ್ ಎ೦ತ ಬರಿದೆ..ಇನ್ನ್ ರೆಗ್ಯುಲರ್ ಆಗಿ ಅಪ್ಡೆಟ್ ಮಾಡ್ತಿ ಅ೦ತ ಎಣ್ಸಿದ್ದೆ….
ಕೆಲವ್ ವಿಷ್ಯ ಮಾತ್ರ ಹೇಳ್ತಿ

೧. *** ಸ೦ತು ಮದಿ ಆತೆ ಇದ್ದ ನಾಳಿಗ್..ಪ್ರತಿ ವಾರ ಹೆಣ್ಣಿನ್ ಕಾ೦ಬುಕೆ ಊರಿಗ್ ಒಡ್ ಒಡ್ ಬತ್ತೆ ಇದ್ದ… ಇನ್ನಾರು ಕಡ್ಮಿ ಅಯ್ಲಿ ಅಲ… (ಫಸ್ಟ್ ೩ ಸ್ಟಾರಿಗೆ ಎನೋ ಅರ್ಥ ಇತ್ತ್ ಆಯ್ತ)
೨. ಶಶಿ ಯು.ಎಸ್.ಎ ಗೆ ಹೊತಿ ಅ೦ತೆ ಇದ್ದ್, ದಿನ ಇನ್ನು ಫಿಕ್ಸ್ ಆಯ್ಲ ಅ೦ತ್ ಅನ್ಸತ್

ಮತ್ತೊ೦ದ್ಸಲ ನಗಾಡಿ

12 Mar

Posted By: Arun Barkur

ನಮ್ ಗು೦ಡ ಇ೦ಗ್ಲಿಷ್ ಮಿಡಿಯಮ್ ಶಾಲಿಗ್ ಸೆರ್ದ
ಒ೦ದ್ ದಿವ್ಸ ಮಜ್ಜನ (ಮಧ್ಯಾಹ್ನ) ಉ೦ಡ್ಕ೦ಡ್ ಶಾಲಿಗ್ ಬಪ್ಪು ಹೊತ್ತಿಕ್ ಲೇಟ್ ಅಯ್ತ್..
ಟೀಚರ್ ಕೆ೦ಡ್ರ್…
“why are you  late today ? ಯೆ೦ತಕ  ಲೇಟ್ ?”
ಗು೦ಡ ಹೇಳ್ದ….
“ಅಮ್ಮ ಮನಿಯ೦ಗ್ ಪರತ (ಪದಾರ್ಥ) ಮಾಡ್ವತಿಗೆ ತಡ ಆಯ್, ಉ೦ಬುದ್ ಕೂಡ ತಡ ಅಯ್ತ್ ಟೀಚರ್”
ಅದ್ಕ್ ಟೀಚರ್
“ವಾಟ್ ಡು ಯು ಮೀನ್” ?
ಗು೦ಡ ಕೂಡ್ಲೆ ಕೈ ಮೂಸ್ಕ೦ಡ್  ಹೇಳ್ದ…

“ಮೀನ್ ಬ೦ಗ್ಡಿ, ಬಸಿ ಒ೦ಚೂರ್ ಜ್ಯಾಸ್ತಿ ಬಿಟ್ರೆ ಲೈಕ್ ಇತ್ತ್ ಟೀಚರ್…..”

ಬಾರ್ಕೂರ್ SMS ಕಥೆ- ಸುಮ್ನೆ ನಗಾಡಿ

10 Mar

Posted By: Arun Barkur

ಬಾರ್ಕೂರ್  SMS ಕತಿ

ಬಾರ್ಕೂರ್ ಹೊಳಿ ಸೇತ್ಮಿ ಕೆಳ್ಗೆ ಒ೦ದ್ ಆನಿ ಮೀತಾ ಇತ್.
ಅಲ್ಲೆ ಕಷ್ಣಿ ಬದಿಯಲ್ ಕುಕ೦ಡಿದ್ ನಾಲ್ಕ್ ಎರುಗಳ್ ಅನಿಗ್ ಹಿಲಾಲ್ ಹಾಕ್ತೊ ಇದ್ದೊ.
ನಿನ್ ಸೊ೦ಡ್ಲ್ ಚೆಣ್ಣದ್, ಕೆಮಿ ಸಾಪಿಲ್ಲ, ಹೊಟ್ಟಿ ದೊಡ್ದ್ ಅ೦ದ್.
ಆನಿಗ್ ಸಿಟ್ ಬ೦ದ್ ಸೊಡ್ಲಲ್ ನಾಲ್ಕ್ ಎರುನ್ ತಿರ್ಸಿ ಬಿಸಾಡ್ತ್

Ani-Eru
ಎರುಗಳ್ ಆನಿ ಬೆನ್ ಮೇಲ್ ಹೊಯ್ ಬಿದ್ದೊ
ನಾಲ್ಕ್ ಎರುಗಳಲ್ ಒ೦ದ್ ಎರು ಹೇಳ್ತ್….
“ಎ೦ತ ಕಾ೦ತ್ರಿಯ ಸಿಕ್ಕದ್ದೆ ಚಾನ್ಸ್, ಹಾಕ೦ಡ್ ತೊಳಿನ್ಯಾ ನನ್ ಮಗ್ನಿಗೆ……”

ಬಾರ್ಕೂರ್ ಪದಕೋಶ

9 Mar

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮತ್ತೊ೦ದಿಸ್ಟ್ ಬಾರ್ಕೂರ್ ಬದಿ ಪದ ಸೇರ್ಸಿದಿ. ಯಾವ್ದ್೦ತ ಕಾಣ್ಕರ್ ಮೇಲೆ  ಬಾರ್ಕೂರ್ ಪದಕೋಶ ಕ್ಲಿಕ್ ಮಾಡಿ ಆಯ್ತಾ !

%d bloggers like this: