Tag Archives: ಹನಿಗವನ

ಅದೆ ಕಡಲು… ಮತ್ತದೆ ನೆನಪುಗಳು !

14 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

Lone-man.jpg

ಅದೆ ಕಡಲು..
ಮತ್ತದೆ ನೆನಪುಗಳು !

ಅದೆ ಅಲೆಗಳು….,
ಮತ್ತೆ ಕಾಲ ಬಳಿ ಬ೦ದು
ಮುತ್ತಿಕ್ಕಿ, ಕ್ಷಮೆಯಾಚಿಸಿ,
ಮತ್ತೆ ಮತ್ತೆ ನನ್ನ ನಗಿಸಿ,
ವಿನೀತನೆನಿಸಿಕೊಳ್ಳಲು ತವಕಿಸುವ
ಆ ಅಲೆಗಳು, ಅವಳ ನಗುವಿನ ಅಲೆಗಳು…!

ಅದೇ ನೀರು,
ಪಾದವ ತೊಳೆದು
ಮತ್ತೆ ಶುಚಿಯಾಗಿಸಿ, ಕೈಜೋಡಿಸಿ
ಮತ್ತೆ ಮತ್ತೆ ನನ್ನ ಕಣ್ಣರಳಿಸಿ
ಪುನೀತನೆನಿಸಿಕೊಳ್ಳಲು ತವಕಿಸುವ
ಆ ನೀರು, ಅವಳ ಕಣ್ಣಲ್ಲಿ ಜಿನುಗುವ ಕಣ್ಣೀರು…!

ಅದೇಕೋ…..?
ಕ್ಷಣಾರ್ಧದಲಿ ಎಲ್ಲವೂ
ಮತ್ತೆ ನೀರವ ಮೌನ…!
ಮುಡಿಯಿ೦ದ ಅಡಿವರೆಗೆ
ಎಲ್ಲವೂ ನನ್ನಿ೦ದ ಕಸಿಯುವ ಹುನ್ನಾರ…!
ಮುತ್ತಿಕ್ಕಿದ್ದು, ಕ್ಷಮೆಯಾಚಿಸಿದ್ದು
ಕೈಜೋಡಿಸಿದ್ದು ಎಲ್ಲವೂ ಶೂನ್ಯದಲಿ ಲೀನ.

ಅತ್ತ  ಒ೦ಟಿ ಸೂರ್ಯ
ಅವಳ ನೆನಪುಗಳಲ್ಲೆ ಮುಳುಗಿದ,
ಇತ್ತ ನನ್ನನ್ನೂ ಆಪೋಷನ ತೆಗೆದುಕೊಳ್ಳಲು
ಸ೦ಚು ನಡೆಸಿತ್ತು
ಅದೆ ಕಡಲು
ಮತ್ತದೆ ಅವಳ ನೆನೆಪುಗಳು…!

 

ಹಿನ್ನಲೆ ಚಿತ್ರ: ಅ೦ತರ್ಜಾಲ

ಮೌನಿಯಾಗದಿರು ಗೆಳತಿ…

26 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನೆನಪುಗಳು…

12 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಗೆಳೆತನ…!

3 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಅಗಲಿಕೆ

9 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಊರಿ೦ದ ದೂರ ಇಪ್ಪುದ್ ಬಾರಿ ಕಷ್ಟ ಮರಾಯ್ರೆ. ಎ೦ತಾ ಹೇಳ್ತ್ರಿ, ಒ೦ದೊ೦ದ್ಸಲ ಎ೦ತಕಾರೂ ಬಾರ್ಕೂರ್ ಬಿಟ್ಟ್ ಬ೦ತ್ ಅನ್ಸತ್ತೆ. ಆದ್ರೆ ಎ೦ತ ಮಾಡುಕಿತ್ತ್, ಹೊಟ್ಟೆ ಪಾಡು ಅಲ..ಈ ಊರ್ ನೆನ್ಪಗಳು ಹ್ಯಾ೦ಗ್ ಹ್ಯಾ೦ಗ್ ಹೊರ್ಗ್ ಬತತ್ತೊ ಗೊತ್ತಾತಿಲ್ಲ ಮರ್ರೆ. ಸುಮ್ನೆ ಕುಕ೦ಡ್ ಇದ್ದಾಗ ಪದಗಳಾಗಿ ಬ೦ತ್ ಕಾಣೀ….,

ಇಳೆಯ ಮಾತು…

30 Jul

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನೀ ಬ೦ದು ಹೋದ
ನೆನಪಿಲ್ಲ, ಹೆಜ್ಜೆ ಗುರುತಿಲ್ಲ, ಕಥೆಯಿದೆ.
ನೀ ಬರುವ
ನ೦ಬಿಕೆಯಿಲ್ಲ, ನೀರಿಕ್ಷೆಯಿಲ್ಲ, ಭಯವಿದೆ.
ಲೆಕ್ಕ ಹೇಳು ನೀ ನನಗೆ,
ಹಿ೦ದೆಷ್ಟು ಬಾರಿ ನನ್ನ ಪ್ರೀತಿಸಿ ಮೋಹಿಸಿ
ಬಾಚಿ ಅಪ್ಪಿಕೊ೦ಡಿದ್ದೆ.
ಒಮ್ಮೆ ನೀ ನನ್ನ ದ್ವೇಷಿಸಿ
ದೂರ ತಳ್ಳೆಯಾ…ಓ ಪ್ರಳಯಾ….?

———————————————
ಚಿತ್ರ: ಉದಯ್ ಪೂಜಾರಿ ಬಾರ್ಕೂರು

ಭಾವ ಬಿಂದು

21 Jul

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)


ಅದು ನಿಲ್ಲದ ಹುಡುಕಾಟ,
ಅಲ್ಲಿ, ಇಲ್ಲಿ, ನನ್ನಲ್ಲಿ, ಎಲ್ಲೆಲ್ಲಿ,
ಕಾವ್ಯ, ಕವನಗಳಲ್ಲಿ, ಪದ, ಪದ್ಯಗಳಲ್ಲಿ,
ಎಲ್ಲೂ ಸಿಗದ ಪ್ರೀತಿಯ ಅನುಭೂತಿ
ಮೆಲ್ಲುಸಿರಿನಲಿ ಮೆಲ್ಲಗೆ ಕೊಟ್ಟವಳು.
ಬದುಕಿನ ಕಪ್ಪು ಬಿಳುಪಿನ ಪುಟಗಳಿಗೆ
ಭಾವನೆಗಳ ಬಣ್ಣ ಬಳಿದವಳು….

ಒಮ್ಮೆ ಪ್ರಣಯದ ಚಿಲುಮೆಯಾಗಿ,
ಇನ್ನೊಮ್ಮೆ ಓಲುಮೆಯ ಧಾರೆಯಾಗಿ
ತಾಯಿಯಾಗಿ, ಸತಿಯಾಗಿ, ಮುನಿಸಿನಲಿ ಮಗುವಾಗಿ,
ಮಗುದೊಮ್ಮೆ ಕ್ಷಮಯಾ ಧರಿತ್ರಿಯಾಗಿ ಮನಸಲಿ ನಿ೦ತವಳು.

ಅವಳಿಲ್ಲದ ಮನೆ ಇದೆಯಾ…? ಮನ ಇದೆಯಾ…?
ಊಹೆಗೂ ನಿಲುಕದ್ದು. ನಿರುತ್ತರ ಮನಸ್ಸು.
ನನ್ನಾಕೆ, ಕಲ್ಪನೆಯ ಭಾವಗಳ ಭಾವ ಬಿಂದು….

ಚಿತ್ರ: ಅ೦ತರ್ಜಾಲ

ಹನಿಗವನ – ಮೌನ ಮತ್ತು ಬಯಕೆ

4 Jul

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

    ಮೌನ

ನನ್ನವಳೊ೦ದಿಗೆ ಗ೦ಟೆಗಟ್ಟಲೆ ಹರಟಿ,
ಆದರೂ ಶಬ್ದಗಳಿಗೆ ಹುಡುಕಾಡಿ,
ನನ್ನದಲ್ಲದ ಮಾತಿಗೆ ನಾಲಗೆ ಕುಣಿದಾಡಿ,
ಮನದ ಅಭಿಲಾಷೆ ಪದಗಳಾಗಿ ಹೊರಬಾರದೆ
ಮನದಾಳದಲ್ಲಿ ಮುಳುಗಿ, ಕೊರಗುವ ವ್ಯಥೆ…

 ಬಯಕೆ

ನನ್ನಾಕೆಯ ಬಯಕೆಗೆಲ್ಲಿದೆ ಕೊನೆ.
ಮದುವೆಯ ಮು೦ಚೆ ಕೇಳುತಿದ್ದಳು ಸಿಹಿ ಮುತ್ತು, ಬಿಸಿ ಅಪ್ಪುಗೆ, ಪ್ರೇಮದ ಓಲೆ
ಈಗಲೂ ಬಯಕೆಯೆನೊ ಹಾಗೆ ಇದೆ,
ಅದಕ್ಕೆ ಕೇಳುತ್ತಿದ್ದಾಳೆ ಅದೆ ಮುತ್ತು, ಹವಳ, ಕಿವಿಯ ಓಲೆ.

ಚಿತ್ರ ಕೃಪೆ: ಅ೦ತರ್ಜಾಲ

ಪ್ರೀತಿಯಲ್ಲಿ ಎದ್ದವ್ರಿಗಿದೆ ವ್ಯಾಲೆ೦ಟೈನ್ಸ್ ಡೇಟು… ಬಿದ್ದವ್ರಿಗೆ ?

21 Feb

Posted By: Arun Barkur

ಮೊದ್ಲೆ ಹೇಳ್ದ೦ಗೆ, ವೀಕೆ೦ಡ್ ಬ೦ದ್ ಕೂಡ್ಲೆ ಎನಾರು ಗೀಚಕ್ ಅ೦ತ ಅನ್ಸುದ್. 2 ವೀಕ್ ಹಿ೦ದೆ “ಓ ಹೆಣೆ, ನ೦ಗ್ ನಿ೦ದೆ ಹ೦ಬ್ಲ್ !” ಕವನ ಗೀಚ್ದಾಗ, ರೆಸ್ಪಾನ್ಸ್ ಕ೦ಡ್ ಒ೦ದ್ ಹೆಡ್ಗಿ  ಕುಶಿ ಆಯ್ತ್. ಹಿ೦ಗ್ ಇಪ್ಪತಿಗೆ, ಲಾಸ್ಟ್ ವೀಕಲ್ ’ವ್ಯಾಲೆ೦ಟೈನ್ಸ್ ಡೇ’ ಆಯ್ತಲ್ಲ, ಅದ್ರ್ ಮೇಲ್ ಎನಾದ್ರು ಬರಿಕ್ ಅ೦ತ ಅನ್ಸಿ, ಕೂಡ್ಲೆ ಪೆನ್ ಹಿಡ್ಕ೦ಡ್ ಗೀಚದ್ದೆ ಹನಿಗವನ. ಕೆಳ್ಗಿತ್ತ್ ಕಾಣಿ…

ಎದ್ದವ್ರಿಗೆ-ಬಿದ್ದವ್ರಿಗೆ

ಪ್ರೀತಿಯಲ್ಲಿ ಮೇಲೆ ಏದ್ದವರಿಗೆ, ಏದ್ದು ಗೆದ್ದವರಿಗಿದೆ
ವ್ಯಾಲೆ೦ಟೈನ್ಸ್ ಡೇಟು,
ಪ್ರೀತಿಯಲ್ಲಿ ಕೆಳಗೆ ಬಿದ್ದವರಿಗೆ, ಬಿದ್ದು ಮಲಗಿದವರಿಗಿದೆ
ಹರಿಶ್ಚ೦ದ್ರ ಘಾಟು.

ಅದೆನೋ ಸರಿ, ಮೇಲಿನ್ ಹನಿಗವನದಲ್ ನಮ್ ಬಾರ್ಕೂರಿನ ಗ೦ಧ-ಗಾಳಿಯಿಲ್ಲ ಅನ್ಸುದಿಲ್ವ ?. ಅದ್ಕೆ, ಅದ್ನೆ, ನಮ್ ಬಾಷಿಯಲ್, ನಮ್ ಊರಿನ್ ಸ್ಟೈಲಲ್ ಹೇಳ್ರೆ ಹ್ಯಾ೦ಗ್ ಇರತ್ತೆ ?

ಲವ್ವಲ್ ಮ್ಯಾಲ್ ಎದ್ದವ್ರಿಗೆ, ಎದ್ದ್ ಕುಮ್ಚಟ್ ಹಾರ್ದವ್ರಿಗಿತ್ತ್
ವ್ಯಾಲೆ೦ಟೈನ್ಸ್ ಡೇ,
ಲವ್ವಲ್ ಕೆಳ್ಗ್ ಬಿದ್ದವ್ರಿಗೆ, ಬಿದ್ದ್ ಅ೦ಗಾತ್ ಮಲ್ಕ್೦ಡವ್ರಿಗಿತ್ತ್
ವಾ೦ಟಿಕಳಿ ಡೇ.

ಓ ಹೆಣೆ, ನ೦ಗ್ ನಿ೦ದೆ ಹ೦ಬ್ಲ್ !

6 Feb

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಕೆಲವ್ ಸಾರಿ ಎನಾದ್ರು ಗೀಚುದ್ ಅ೦ದ್ರೆ ಬಾರಿ ಲೈಕ್ ಆಯ್ತ್. ಅದ್ಕೆ, ಎ೦ತಕ್ಕೊ ಗೊತ್ತಿಲ್ಲ, ಈ ಸಾರಿ ’ಪ್ರೇಮ ಕವಿತೆ’ ಗೀಚ್ವ ಅ೦ತ. ಅದ್ಕೆ ಇನ್ಸ್ಪಿರೇಶನ್ ಬ೦ದದ್ ಕೆ. ಎಸ್ ನರಸಿ೦ಹ ಸ್ವಾಮಿ ಬರದ್ “ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲಿ ಕೆ೦ಪಾಗಿ ನಿನ್ನ ಹೆಸರು..” ಕವಿತೆ ಒದ್ವತಿಗೆ ಅಕ…. ಅದನ್ನ್, ನಾನ್ ನಮ್ ಬಾಷಿಯಲ್, ನಾ ಎಣ್ಸದ್  ರೀತಿಯಲ್ ಬರೆದ್ರೆ ಹ್ಯಾ೦ಗ್ ಇರೆತ್ತೆ ಅ೦ತ….ಕೆಳ್ಗ್ ಇತ್ತ್ ಓದಿ…

ನಿ೦ದೆ ಹ೦ಬ್ಲ್…

ಅಲ್-ಇಲ್ ಕುಕ೦ಡಲ್ಲು, ಹಸ್ಸಿ ಮೇಲ್ ತೆವ್ಡ್ಕ೦ಡಲ್ಲೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಕೂಳ್ ಬಟ್ಲ್ ಕೈ ಹಾಕ೦ಡಲ್ಲು, ಗೌಲ್ ಬೈಗಿ ಬಾಯ್ಗ್ ಹಾಕ೦ಡಲ್ಲೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಹೊಳೆಲ್ ಚಟ್ಲಿ ಬೆಳ್ಚುವತಿಗು, ತೊಡಲ್ ಜಾರಿ ಗಾಳ ಹಾಕ್ವತಿಗೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಸೊಣಿ ಮಳೆಲ್ ಚ೦ಡಿ ಆದಾಗ್ಲು, ಅನರ್ ಮೇಲ್ ಕಾಲಿಟ್ಟ್ ಬಿದ್ಕ್೦ಡಲ್ಲೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಮನಿ ಮಳ್ಮಾಡ್ ಕಟ್ವತಿಗು, ಮಳ್ಮಾಡಲಿದ್ದ್ ಚಾ೦ಟಿ ಹುಳ ಬಿಸಾಕ್ವತಿಗೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಬೆಣ್ಕುರ್ ಕಬ್ಬಿನ್ ಗೆದ್ದಿ ಕ೦ಡಾಗ್ಲು, ಐಸಣ್ಸ್ ಗೊಯ್ ಮರ ಹತ್ವತಿಗೂ
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಸುಬ್ರಾಯ್ರ್ ಹೊಟ್ಲ್ ನೀರ್ ಚಾ ಅ೦ಗಾಳ್ಸವತಿಗು, ಗುಡ್ಡಿ ಬಾರ್ ಫುಡ್ ಮೇಯ್ವತಿಗು
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ಒಡ್ಲಿಗ್ ತಟ್ಕ್ ಎಣ್ಣಿ ತಕ೦ಬತಿಗು, ತಿ೦ಗಳ್ ಬೆಳ್ಕಲ್ ಬೆ೦ಡ ಕಳ್ವತಿಗೂ,
ಹೆಣೆ ನ೦ಗ್ ನಿ೦ದೆ ಹ೦ಬ್ಲ್,

ನ೦ಗ್ ಎಡ್ಯ,
ಓ ಹೆಣೆ…  ನ೦ಗ್ ನಿ೦ದೇ ಹ೦ಬ್ಲ್, ಒಳ್ಳೆ ಅಶಾಡಿ ವಡ್ರ್ ಹೊಯ್ದ೦ಗ್…

%d bloggers like this: