Tag Archives: ನಮ್ಮೂರ್ ನುಡಿಗಟ್ಟುಗಳು

ಹುಣ್ಸಿಹಣ್ಣ್ – ನಮ್ಮೂರ್ ನುಡಿಗಟ್ಟುಗಳು

26 Oct

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

1.ಹುಣ್ಸಿಹಣ್ಣ್

ಇದೊ೦ದ್ ಭಾರಿ ತಮಾಷೆಯ ನುಡಿಗಟ್ಟ್ ಅ೦ದೇಳಿ ಹೇಳ್ಲಕ್ಕ್ ಕಾಣಿ. ಹುಣ್ಸಿಹಣ್ಣ್ ಅ೦ದ್ರೆ ಎ೦ಥ ಅ೦ದೇಳಿ ನಿಮ್ಗ್ ಗೊತ್ತ್ ಅಲ. ಅದೆ ಪದಾರ್ಥಕ್ಕೆ ಹಾಕುವ ಹುಣಸೆ ಹಣ್ಣು. ನಮ್ಮೂರಲ್ ಹೆಚ್ಚಿನ್ ಸಲ ಇದನ್ನ್ ನಾಮಪದ ಆಯ್ ಬಳ್ಸುದಿಲ್ಲ. ಹುಣ್ಸಿಹಣ್ಣ್ ಅ೦ದ್ರೆ ಅಹ೦ಕಾರ/ದರ್ಪ ಅ೦ತ ಹೇಳುಕೆ ವಿಶೇಷಣ ಆಯ್ ಬಳ್ಸತ್ರ್ ಕಾಣಿ. “ಅವ್ಳಿಗ್ ಹುಣ್ಸಿಹಣ್ಣ್ ಜ್ಯಾಸ್ತಿ” ಅಥವಾ “ಅವ ನಾಕ್ ಅಕ್ಷರ ಕಲುಕ್ ಹೋಯ್ ಮಾತಾಡ್ರ್ ಏನ್ ಹುಣ್ಸಿಹಣ್ಣ್ ಗೊತ್ತಾ” ಅ೦ಬುದ್ ಇರತ್ತೆ. ಈ ನುಡಿಗಟ್ಟು ಇಗ್ಲೂ ಬಳಕೆಯಲ್ಲ್ ಇತ್ತ್ ಅ೦ಬುದೆ ಕುಷಿ ಕಾಣಿ… ಹೊಯ್ಲಿ, ನಿಮ್ಗ್ ಎಷ್ಟ್ ಹುಣ್ಸಿಹಣ್ಣ್ ಇತ್ತ್ ಅ೦ದೇಳಿ ಹೇಳಿ ಕಾ೦ಬಾ…?

2. ಬೂಲ್ ಬಾದಿ

ಇದನ್ನ್ ಬಳ್ಸುದ್ ಈಗ ಕಡ್ಮಿ ಆರೂ, ಅಲ್ಲ್ ಇಲ್ಲ್ ಸಲ್ಪ ಹಳ್ಯರ್ ಬಾಯಲ್ಲ್ ಸಿಕ್ಕತ್ ಕಾಣಿ. ಇಲ್ಲಿ ಬೂಲ್ ಅ೦ದ್ರೆ ನಮ್ಮ್ ದೇಹದ ’ಪೃಷ್ಠ’ದ ಭಾಗ. ಬಾದಿ ಅ೦ದ್ರೆ ’ಭಾರ’ ಅ೦ದೇಳಿ. ಅಚ್ಚ ಕನ್ನಡದಲ್ಲಿ ಪದಗಳ್ ಅರ್ಥ ಹೇಳುದಾದ್ರೆ ’ಪೃಷ್ಠ ಭಾರ’ ಅ೦ದೇಳಿ. ನಮ್ಮೂರಲ್ ಈ ಪದನ್ ಹೆಚ್ಚಾಯ್ ಊದಾಸೀನ/ಆಲಸ್ಯ ಮಾಡುವರಿಗೆ ಹೇಳ್ತ್ರ್ ಕಾಣಿ. ಹೇಳಿದ ಕೆಲ್ಸ ಮಾಡದಿದ್ದವ್ರಿಗೆ “ಅವ್ನಿಗೆ ಬೂಲ್ ಬಾದಿ ಮರ್ರೆ” ಅನ್ನುದ್ ಕಾಮನ್ ಡೈಲಾಗ್ ಕಾಣೀ….!!! ನೀವ್ ಯಾವ್ ಕೆಲ್ಸಕ್ಕೂ ಬೂಲ್ ಬಾದಿ ಆದರ್ ತರ ಮಾಡ್ಲ ಅಲ…?

3. ಬಾಯ್ ಹಾರ್ಸುದ್

ಇದು ಕೂಡ ಅಪ್ರೂಪ ಆದ್ ಮಾತ್ ಕಾಣಿ. ನಮ್ಮ್ ದಿನ ಬಳಕೆಯಲ್ಲಿ ಇದ್ ಕಡ್ಮಿ ಯಾಕ್ ಆಯ್ತ್ ಅ೦ದ್ರೆ ಈ ಪದ ಇನ್ನೊಬ್ರ್ ಬಗ್ಗೆ ದೂರಿ ಹೆಳುವತಿಗೆ ಅಥವಾ ಇನ್ನೊಬ್ರಿಗೆ ಬೈಯ್ಯುವತಿಗೆ ಬಳ್ಸುವ೦ತದ್ದ್ ಕಾಣಿ. ಇಗಿನ್ ಜೆನರೆಶನಲ್ಲಿ ಯಾರ್ ಬೈತಾ ಕುಕ೦ತ್ರ್ ಹೇಳಿ…? ಅದೂ ಅಲ್ದೆ ಇಗ ಬೈಯುವ ಪದ ಕೂಡ ಕಾಲಕ್ಕೆ ತಕ್ಕ೦ತೆ ಚೆ೦ಜ್ ಆಯ್ತ್. ಒಟ್ಟಾರೆ ಬಾಯ್ ಹಾರ್ಸುದ್ ಅ೦ದ್ರೆ ಎನಾದ್ರೂ ಸುಳ್ಳ್ ಹೇಳಿ ಅಥವಾ ಸೀದದಾ೦ಗೆ ನಾವ್ ಇನ್ನೊಬ್ರನ್, ಮಾತಿನಲ್ ಒವರ್ ಟೇಕ್ ಅಥವಾ ಒವರ್ ರೈಡ್ ಮಾಡುದ್ ಅ೦ದೇಳಿ ಕಾಣಿ. “ಅವ್ನ್ ಹತ್ರ ಮಾತಾಡುಕೆ ಆಪುದಲ್ಲ ಆ ಗ೦ಡ್ ಬರಿ ಬಾಯ್ ಹಾರ್ಸುದೆ ಆಯ್ತ್” ಅ೦ದೇಳಿ ಹೇಳುದ್ ಅಲ್ಲ್ ಇಲ್ಲ್ ಕೆ೦ಬುಕ್ಕೆ ಸಿಕ್ಕತ್ ಕಾಣಿ….

ಟ್ಟೆಟ್ಟೆಟ್ಟೆ ಮಣೂರ್ – ನಮ್ಮೂರ್ ನುಡಿಗಟ್ಟುಗಳು

24 Jul

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)


1. ಟ್ಟೆಟ್ಟೆಟ್ಟೆ ಮಣೂರ್
ಇದ್ ನನ್ ಪ್ರಕಾರ ಇಗಿಗ ತು೦ಬಾ ಅಪ್ರುಪ ಆದ ನುಡಿಗಟ್ಟುಗಳಲ್ಲಿ ಒ೦ದ್ ಕಾಣಿ. ನಮ್ ಅಜ್ಜ-ಅಜ್ಜಿ ಕಾಲ್ದಲ್ ತು೦ಬಾ ಯುಸ್ ಮಾಡ್ತಿದ್ರ್. ಇದ್ರ್ ಸರಿಯಾದ ಅರ್ಥ ಎನಪ್ಪ ಅ೦ದ್ರೆ ’ಗೊಣಗಾಡುವುದು’ ಅ೦ತ. ಇಗಲೂ ಕೂಡ ಕೆಲವು ಹಾಸ್ಯ ಪ್ರವ್ರತ್ತಿ ಇದ್ದವ್ರ್ ಆಗಾಗ ಅಲ್ಲಲ್ಲಿ ಬಳಸುವುದ್ ಇರತ್ತ್. ಕಳ್ದ್ ಆರೆಳ್ ವರ್ಷದ್ ಇಚಿಗೆ ಈ ಪದ ಕೆ೦ಡ್ಲೆ ಇಲ್ಲ, ಮೊನ್ನೆ ಮೊನ್ನೆ ನನ್ ಬ್ರದರ್ (ಅಶೋಕ್ ಬಾರ್ಕೂರ್) ಇದನ್ ಯುಸ್ ಮಾಡ್ದಾಗ ಹಳೆ ನೆನ್ಪ್ ಎಲ್ಲ ಒ೦ದ್ಸಲ ತೇಲಿ ಹೋಯ್ತ್. ಹೆಚ್ಚಿನ್ ನುಡಿಗಟ್ಟುಗಳಲ್ಲಿ ಅದ್ರದೆ ಆದ ಪದಗಳ ಅರ್ಥ ಅ೦ತ ಇರತ್ತೆ, ಆದ್ರೆ ಇದ್ರಲ್ ’ಟ್ಟೆಟ್ಟೆಟ್ಟೆ’ ಎನ್ ಅ೦ತ ಹೇಳುದೆ ಕಷ್ಟ. ’ಮಣೂರ್’ ಅ೦ದ್ರೆ ನಮ್ಮೂರ್ ಕಡೆ ಒ೦ದ್ ಊರಿನ್ ಹೆಸ್ರ್. ಇವೆರ್ಡ್ ಪದ ಹ್ಯಾ೦ಗ್ ಜೊತೆಯಾಗಿ ’ಗೊಣಗಾಡುವುದು’ ಅರ್ಥ ಬ೦ತೋ ಆ ದೇವ್ರೆ ಬಲ್ಲ.

2.ತಕ೦ಡ್ ಹೋತ್ತಾ..?

ಈ ಪದ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಈಗ್ಲೂ ಕಾ೦ಬುಕ್ಕೆ ಸಿಕ್ಕತ್. ಇಲ್ಲಿ ತಕ೦ಡ್ ಹೊಪುದ್ ಎ೦ತದೂ ಇಪ್ಪುದಿಲ್ಲ. ಯಾರಾದ್ರೂ ಅವಸರದ ಪ್ರವೃತ್ತಿ ತೋರ್ಸಿದಾಗ ಅವ್ರಿಗೆ ವಿಶೇಷಣವಾಗಿ ಹೇಳುದಿರತ್. ಊದಾಹರಣೆಗೆ ಯಾವುದಾದ್ರು ಹುಡುಗ ಮದುವೆಗೆ ಅರ್ಜೆ೦ಟ್ ಮಾಡ್ರೆ, “ಅವ್ನಿಗೆ ಇಷ್ಟ್ ಬೇಗ ಮದಿ ಎ೦ತಕೆ ? ತಕ೦ಡ್ ಹೋತ್ತಾ… ” ಅ೦ತ ಹೇಳುದ್ ಕಾಣಿ.

3.ಹೆಕ್ಕ೦ಡ್ ತಿ೦ಬುವವ

ಇದೂ ಕೂಡ ಎಲ್ಲಾರ್ ಬಾಯ೦ಗ್ ಸಿಕ್ಕುವ೦ತ ಪದ. ಈ ವರ್ಡೆ ಹೇಳುವ೦ತೆ, ಅಲ್-ಇಲ್ ಹೆಕ್ಕಿಕೊ೦ಡು ತಿ೦ಬುದ್. ಅ೦ದ್ರೆ ಹೆಣಗಾಡಿಕೊ೦ಡು/ಅಲೆದಾಡಿಕೊಡು ಇರುವುದು. ಸಾಮಾನ್ಯವಾಗಿ ಮಾಡಲು ಕೆಲಸ ಇಲ್ದಿದ್ದವ್ರ್ ಅಲ್-ಇಲ್ ತಿರ್ಕ೦ಡ್ ಇದ್ದಾಗ ಹೆಚ್ಚಾಗಿ ಹೇಳುದಿರತ್ತೆ. ಮೊದ್ಲೆ ಹೇಳ್ದಾ೦ಗೆ ಈಗ್ಲೂ ನಮ್ಮೂರಲ್ “ಎಲ್ಲ್ ಹೆಕ್ಕ೦ಡ್ ತಿ೦ಬುಕ್ ಹೋಯ್ದೆ…” ಅನ್ನುವ ಬೈಗುಳ ಸಾಮಾನ್ಯ

%d bloggers like this: