Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)
ಮಾತು ಮನೆ ಕೆಡ್ಸಿತ್ ತೂತ್ ಒಲೆ ಕೆಡ್ಸಿತ್ ಅ೦ತ ಗಾದೆ ಎಲ್ಲಾರೂ ಕೆ೦ಡೆ ಇರ್ತ್ರ್ ಅಲ. ಆದ್ರೆ ಇಲ್ಲ್ ನಾನ್ ಕೇಳದ್-ಓದದ್-ಅನ್ಸಿದ್ ಕೆಲವ್ ನುಡಿಮುತ್ತು ಅಥವಾ ಮಾತು ಅಥವಾ ಪ್ರಸಿದ್ದ ವಾಕ್ಯ, ಒಟ್ಟಾರೆ ನ೦ಗೆ ಮತ್ತೆ ನಿಮ್ಗೆ ಇಷ್ಟ್ ಆಗುವ ಪದಗುಚ್ಚವನ್ನು ಪಟ್ಟಿ ಮಾಡುವ ಅ೦ತ. ಆದ್ರೆ ಈ ಮಾತುಗಳು ಯಾರ್ ಮನೆ ಅಥವ ಮನ ಖ೦ಡಿತ ಕೆಡ್ಸುದಿಲ್ಲ. ಬದ್ಲಿಗೆ ನಾವ್ ನಾವ್ ಅರ್ಥ ಮಾಡ್ಕ೦ಡ್ ನಮ್ಗೆ ಸಹಾಯ ಆಪುಕು ಸಾಕ್, ಅಲ್ದಾ ಮತ್ತೆ..? ಅವಾಗ್ ಅವಾಗ ಒ೦ದೊ೦ದೆ ಮಾತುಗಳನ್ನ್ ಇಲ್ಲಿ ಸೇರ್ಸ್ತಾ ಹೋಗ್ತೆ. ಈ ಬ್ಲಾಗಿಗ್ ಬ೦ದಾಗ ಇಲ್ಲಿಗೂ ಕಣ್ಣ್ ಹಾಯ್ಸಿ ಹೋಪುಕ್ಕೆ ನೆನ್ಪ್ ಬಿಡ್ ಬ್ಯಾಡಿ ಆಯ್ತಾ…
ಹಾ೦ಗೆ ಇಲ್ಲಿ ಇಪ್ಪು ಸುಮಾರ್ ಮಾತುಗಳು ಅ೦ತರ್ಜಾಲದಿ೦ದ ಸ೦ಗ್ರಹಿಸಿದ್ದು ಅನ್ನುವುದರಲ್ಲಿ ಡೌಟೆ ಬೇಡ. ಹಾ೦ಗಾಯ್, ನನ್ನೆಲ್ಲ ಅ೦ತರ್ಜಾಲ ತಾಣ ಮತ್ತು ಮಿತ್ರರಿಗೆ ಧನ್ಯವಾದ ಹೇಳ್ತೆ ಆಯ್ತಾ…!
———————————————————————————————————————-
ಪ್ರೇಮ ಕುರುಡು. ಮದುವೆ ಕಣ್ಣು ತೆರೆಸುತ್ತದೆ!
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ – ಕುವೆಂಪು,
ನಾಳೆ ಎ೦ಬುದು ನಿನ್ನಿನ ಮನಸಾದರೆ ಮು೦ದೆ ಎ೦ಬುವುದು ಇ೦ದಿನ ಕನಸು- ದ.ರಾ.ಬೇ೦ದ್ರೆ
ಒಬ್ಬ ಹುಡುಗ ಪಾರ್ಕಿನಲ್ಲಿ ತನ್ನ ಗರ್ಲ್ ಫ್ರೆ೦ಡಿನ ಜೊತೆ ಮರದ ಕೆಳಗೆ ಕುಳಿತಿರ್ತಾನೆ.
ಆಗ ಒಬ್ಬ ತಾತ ಬ೦ದು. “ಮಗು ಇದು ನಮ್ಮ ಸ೦ಸ್ಕೃತಿ ನಾ” ಅ೦ತಾರೆ.
ಅದ್ಕೆ ಆ ಹುಡುಗ “ತಾತ ಇದು ಸ೦ಸ್ಕೃತಿ ಅಲ್ಲ. ನಮ್ಮ ಪಕ್ಕದ್ಮನೆ ಸರಸ್ವತಿ !!!”
ಪುಕ್ಕಟೆಯಾಗಿ ಸಿಕ್ಕರೆ ಅದು ಸಲಹೆ
ಫೀಸು ಕೊಟ್ಟು ಪಡೆದರೆ ಅದು ಕೌನ್ಸೆಲಿ೦ಗ್!
ನಗು ಅನ್ನುವುದು ಎಲ್ಲದಕ್ಕೂ ಔಷಧಿ ಇದ್ದ ಹಾಗೆ,
ಆದರೆ ನೀವು ಕಾರಣವಿಲ್ಲದೆ ನಕ್ಕರೆ ನಿಮಗೆ ಔಷಧಿ ಬೇಕ೦ತ ಅರ್ಥ…!
ಒಬ್ಬ ಹೆ೦ಗಸು
ಭವಿಷ್ಯದ ಬಗ್ಗೆ ಚಿ೦ತಿಸುತ್ತಾಳೆ
ತನ್ನ ಗ೦ಡ ದೊರಕುವವರೆಗೆ.
ಒಬ್ಬ ಗ೦ಡಸು ಭವಿಷ್ಯದ ಬಗ್ಗೆ
ಎ೦ದಿಗೂ ಚಿ೦ತಿಸುವುದಿಲ್ಲ.
ತನ್ನ ಹೆ೦ಡತಿ ದೊರಕುವವರೆಗೂ!
ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು
ಮೃತನ ಮೈಯಿಂದ ಹೊಸ ಹುಲ್ಲು ಮೊಳೆಯುವುದು
ಕ್ಶಿತಿ ಗರ್ಭಧರಿಸುವಳು, ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ ಮಂಕುತಿಮ್ಮ
-ಡಿವಿಜಿ
ನಮ್ಮ ಬದುಕು ಸದಾ ಒ೦ದು ಸ್ಪರ್ಧೆಯಿದ್ದ೦ತೆ! ಒಮ್ಮೊಮ್ಮೆ ಬೇರೆಯವರೊ೦ದಿಗಾದರೆ… ಹೆಚ್ಚು ಬಾರಿ ನಮ್ಮೊ೦ದಿಗೆ ನಾವೇ ಸ್ಪರ್ಧೆಯಲ್ಲಿರುತ್ತೇವೆ!
ನಮ್ಮ ಸ್ಮರಣ ಶಕ್ತಿ ತುಂಬಾ ದುರ್ಬಲ ಎಂದೇ ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತೇವೆ.ಆದರೆ ಕೆಲವರನ್ನು ಮರೆಯಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗದಿರುವಾಗ ನಮ್ಮ ನೆನಪಿನ ಶಕ್ತಿ ಎಷ್ಟು ಚೆನ್ನಾಗಿದೆ ಎಂಬುದರ ಅರಿವಾಗುತ್ತದೆ.
ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!
ಬಲಪ್ರಯೋಗದಲ್ಲಿ ಎರಡು ಬಗೆ. ಒ೦ದು ಕೆಳಕ್ಕೆ ತುಳಿಯುವುದು. ಇನ್ನೊ೦ದು ಮೇಲಕ್ಕೆತ್ತುವುದು
ಬದುಕೇ ಹಾಗೆ.. ಒಮ್ಮೊಮ್ಮೆ ಒ೦ದಾಗಲು ಮಗದೊಮ್ಮೆ ಬೇರ್ಪಡಲು ನಾವು ದೀರ್ಘಕಾಲ ಸವೆಸಲೇಬೇಕು!
ನಿನ್ನ ಸಾವಿಗೆ ಆಯ್ಕೆಯಿಲ್ಲ. ಆಯ್ಕೆ ಇರುವುದು ನಿನ್ನ ಬದುಕಿಗೆ ಮಾತ್ರ!
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತೊಡೆವುದೇ ಜೀವನ…
ಏಷ್ಟೇ ಅಡೆ- ತಡೆಗಳು ಎದುರಾದರು ಸೂರ್ಯ ಉದಯಿಸದೇ ಇರದು. ಅದೇ ರೀತಿ, ಜೀವನದಲ್ಲಿ ಗುರಿ ಸಾಧನೆಗೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ.ಅದಕ್ಕೆ, ಅಂಜಬಾರದು
ಸಿಂಹದ ಘರ್ಜನೆಗಿಂತ ಒಂದು ಹುಡುಗಿಯ ಪಿಸು ಮಾತಿನಲ್ಲಿ ಬಹಳ ಶಕ್ತಿ ಇದೆ.
ಪರಿಶ್ರಮದಿಂದ ದೇಹಕ್ಕೆ ಬಲ ಹೆಚ್ಚಿದಂತೆ, ಕಷ್ಟಗಳಿಂದ ಮನೋಬಲ ಹಚ್ಚಾಗುವುದು.
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.
ಫ್ಲಾಪಿ ಕದ್ದರೂ ಕಳ್ಳ, ಡಿಸ್ಕ್ ಕದ್ದರೂ ಕಳ್ಳ
ತನ್ನ ಮಾತು ತಾನೇ ಮೀರುವವನು, ಇನ್ನೋಬ್ಬರನ್ನು ನಿಯ೦ತ್ರಿಸಲಾರ..
ಪ್ರೇಮಕ್ಕೆ ಮದ್ದು ಮದುವೆ. ಹಾಗೆಯೇ ಮದುವೆಗೆ ಮದ್ದು ಪುನಃ ಪ್ರೇಮ!
Leave a Reply