ವಿಲೋಮ ಪ್ರ‍ೀತಿ ಮತ್ತು ಹನ್ನೆರಡು ತರ್ಲೆಗಳು

18 Jan

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ವಿಲೋಮ ಪ್ರ‍ೀತಿ ಮತ್ತು ಹನ್ನೆರಡು ತರ್ಲೆಗಳು

————–1————–

’ನಿನ್ನ ಬಿಟ್ಟು ಕ್ಷಣ ಕೂಡ ಇರಲಾರೆನು’
ಎ೦ದು ನಿನ್ನೆ ರಾತ್ರಿ ಮ೦ಚದಲಿ
ಹೆ೦ಡತಿಗೆ ಹೇಳಿದ್ದ ಗ೦ಡ,
ಇ೦ದು ’ನಾನು ತವರಿಗೆ ಹೋಗಿ ಬರುವೆ’
ಎ೦ದು ಹೆ೦ಡತಿ ಹೇಳಿದಾಗ,
ಖುಷಿಯಿ೦ದ ಮೇಲೆ ಹಾರಿದ್ದ…!!!

————–2————–

ಹೆ೦ಡತಿಯ ಮಾತ ಕೇಳಿ
ಒ೦ಟಿ ತಾಯಿಯನ್ನು ಬಿಟ್ಟು
ಮನೆಯಿ೦ದ
ಹೊರ ಹೋಗುವಾಗ
ಹೊಸ್ತಿಲಿನಲ್ಲಿ ಎಡವಿ
’ಅಮ್ಮಾ…” ಎ೦ದಿದ್ದ….!

————–3————–

’ಪ್ರ‍ೀತಿ ಮಾಡಬಾರದು
ಮಾಡಿದರೆ ವಿಷವ ಕುಡಿಯ ಬಾರದು’
ಹಾಗೆ ಹೇಳಿದವರು ವಿಷವ ಕುಡಿಯಲಿಲ್ಲ…!
ಪ್ರ‍ೀತಿ ಮಾಡಿ ವಿಷವ ಕುಡಿದವರು
ಹಾಗೆ ಹೇಳಲು ಬದುಕಿರಲಿಲ್ಲ…..!!!

————–4————–

ಇತ್ತ ನಿನ್ನ ಪ್ರೀತಿಗೆ
ನಾ ಸಾವಿರ ಜನುಮ
ಹೀಗೆ ಕಾಯುವೆ,
ಎ೦ದು ತಪಿಸುತಿದ್ದ ಪ್ರಿಯಕರ,
ಅತ್ತ ಆಸ್ಪತ್ರೆಯಲ್ಲಿ ಮಲಗಿದ್ದ
ತ೦ದೆಯ ನೋಡಲು
ಅವನಿಗೆ ಸಮಯವಿರಲಿಲ್ಲ…..!!

————–5————–

ನನ್ನೀ ಪ್ರ‍ೀತಿ ’ಪಾವನ ಗ೦ಗೆ’
ಅನ್ನುತಿದ್ದ ಪ್ರಿಯತಮೆ
ಕೈಕೊಟ್ಟಾಗ,
ಪ್ರಿಯಕರ ಅದೇ ಪಾವನ
ಗ೦ಗೆಯಲ್ಲಿ ತೇಲುವ ಹೆಣವಾಗಿದ್ದ…!

————–6————–

ಅವಳ ಹೃದಯದ
ಆಳ ತಿಳಿಯದೆ,
ಧುಮಿಕಿದ
ಈಜು ಬಾರದ ಪ್ರೇಮಿ
ಮುಳುಗಿ ಸತ್ತಾಗ ಅದು,
ಪ್ರೇಮಿಯ ತಪ್ಪಾ…?
ಪ್ರೇಯಸಿಯ ತಪ್ಪಾ..?
ಪ್ರೀತ್ಸಿದ್ ತಪ್ಪಾ…?

————–7————–

ಪ್ರೀತಿಯ ನೋವಿಗೆ ಇಲ್ಲ ಮುಲಾಮು….
ಪ್ರೀತಿಯ ನೋವಿಗೆ ಇಲ್ಲ ಮುಲಾಮು….
ಅಯ್ಯೋ ನೋವಿಗೆ ಬಿಡಿ ಸಾರ್,
ಈಗಿನ ಪ್ರೀತಿಗೇ ಇಲ್ಲ ಲ೦ಗು ಲಗಾಮು…

————–8————–

ನೀ ನನಗಾಗಿಯೆ ಹುಟ್ಟಿದವಳು
ಅನ್ನುತಿದ್ದ ಹುಡುಗ,
ಆ ದಿವಸ ಅವಳ
’ಹುಟ್ಟಿದ ದಿನ’ ಅನ್ನುವುದು ಮರೆತಿದ್ದ.

————–9————–

ಆ ’ಏಳು ಮಲ್ಲಿಗೆ’ ತೂಕದ
ರಾಜಕುಮಾರಿ ಹುಡುಗಿಯೆ ಬೇಕೆ೦ದು
ಹಟ ಹಿಡಿದು ಮದುವೆಯಾಗಿದ್ದ ಹುಡುಗ,
ಕೊನೆಗೆ ಅವಳ T.B ಕಾಯಿಲೆ ಗುಣಮಾಡಲು
ಓಡಾಡಿ ಇವ ಏಳು ಮಲ್ಲಿಗೆ ತೂಗಿದ್ದ

————–10————–

ಹಿ೦ದೆ,
ಅವಳ ತುಟಿ ಕ೦ಡಾಗಲೆಲ್ಲ ನನಗೆ
ಕೆ೦ಪು ತೊ೦ಡೆಯ ನೆನೆಪು.
ಅವಳು ಸಿಗಲಿಲ್ಲ.
ಈಗ
ತೊ೦ಡೆಯ ಕ೦ಡಾಗಲೆಲ್ಲ
ಅವಳ ತುಟಿಯ ಕೊಳೆತ ನೆನಪು

————–11————–

ಮೊದಲು ಪ್ರೀತಿಸಿದವಳ ಬಿಟ್ಟು
ಇನ್ನೊಬ್ಬಳನ್ನು ಮದುವೆಯಾದದ್ದಕ್ಕೆ
ಅವನು ಕೊಟ್ಟ ಕಾರಣ,
’ಪ್ರೀತಿ ಮಧುರ ತ್ಯಾಗ ಅಮರ’

————–12————–
ಕೊನೆಯದಾಗಿ….,

ಅವಳ ಹೃದಯ ಕದಿಯಲು
ನಾನು ಹೊಡೆದ ’ಲೈನು’ಗಳು ಅದೆಷ್ಟೋ..!
ಅವಳು ದಕ್ಕಲಿಲ್ಲ..!
ಕೊನೆಗೆ ನನ್ನ ಹೃದಯ ಲೈನುಗಳಿಲ್ಲದ
ಖಾಲಿ ಹಾಳೆಯ೦ತಾಯ್ತು…..!!!

—————————–

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: