Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)
ನೂರು ದಿನಗಳ ನೋವಿಗೆ
ಮೂರು ದಿನಗಳ ಹೋರಾಟದ ಕಾವು…!
ಅನಿತರಲ್ಲಿ ಅವರಿಸುವ ನಿಶ್ಯಬ್ದಗಳ ನಡುವೆ
ಮತ್ತದೆ ಒಡೆದ ಬಳೆಗಳ ಮಾರ್ದನಿಸುವ ಸದ್ದು…!
ಅಲ್ಲಿ ಕೂಗಾಡಿ, ಇಲ್ಲಿ ಹೋರಾಡಿ,
ಸ೦ಜೆ ಸೂರ್ಯನ ಹಾಗೆ
ತಣ್ಣಗೆ ಮುಳುಗುವ ಸಬಲೀಕರಣದ ರಾಪು…!
ಈ ಮುಗಿಯದ
ನೋವು-ಕಾವುಗಳ ನಡುವೆ,
ಒಡೆದು ಚದುರಿದ ಬಳೆಗಳು
“ನಾ ಕೈಗಳಿಗೆರುವ ಮು೦ಚೆ ಒಡೆದೆನಾ ? ಇಲ್ಲಾ,
ಕೈಗಳಿಗೆರಿದ ಮೇಲೆ ನನ್ನ ಒಡೆದರಾ…?”
ಎ೦ದು ಮೆಲ್ಲಗೆ ಕೇಳುವ ಪ್ರಶ್ನೆಗೆ
ಉತ್ತರ ಕಾಣದಾಗಿತ್ತು….!!!
.
ಚಿತ್ರ ಕೃಪೆ: ಅ೦ತರ್ಜಾಲ
Leave a Reply