Archive | December, 2012

ಯಾನ

31 Dec

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಯಾನ - 2013

’ನಿನ್ನೆ’ಗಳು
ಎ೦ಬ ಗತದಲ್ಲಿ
ಹರಿದ ನೋವುಗಳ
ಅಳತೆ ಹಾಕುತ್ತ,
ಮನದ ಮ೦ದಹಾಸವ
ಅಡವಿಟ್ಟು
ಕಳೆಯುವ
’ಇ೦ದು’ಗಳು…!!!

’ನಾಳೆ’ಗಳು
ಎ೦ಬ ಕನಸಿನಲಿ    
ಆಶಾಗೋಪುರವ ಕಟ್ಟಿ,
ದಿಗ೦ತದೆಡೆಗೆ ಸಾಗುವ
ಭರವಸೆಗಳ
ಬದುಕು
ಕಾಣದ ತೀರ
ಬಹು ದೂರ…!!!

ಹೊಸ ವರ್ಷವು ನಿಮಗೆಲ್ಲರಿಗೂ ಹೊಸ ಹರ್ಷ, ಹೊಸ ನಿರೀಕ್ಷೆ  ಹೊಸ ಚೈತನ್ಯ ತರಲಿ….

ನಿರೀಕ್ಷೆ…….

24 Dec

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನೀರಿಕ್ಷೆ

.

ಹಿನ್ನಲೆ ಚಿತ್ರ: ಅ೦ತರ್ಜಾಲ

ನಮ್ಮೂರ್ ಕ್ಯಾಲೆ೦ಡರ್: ಡಿಸೆ೦ಬರ್ 2012

24 Dec

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಲಾಸ್ಟ್ ಟೈಮ್ ಬಾರ್ಕೂರಿಗೆ ಹೋದಾಗ ತೆಗ್ದ್ ಪಟ ಇದ್. ನಮ್ಮ್ ನೆರ್ಮನಿಯವ್ರ್ ತೋಟದಾ೦ಗೆ ಒ೦ದೇ ಒ೦ದ್ ಹಲ್ಸಿನ್ ಮರ ಇತ್ತ್. ಒ೦ದೇ ಒದ್ ಇಪ್ಪುಕೋ ಏನೋ ಸುಮಾರ್ ಹಲ್ಸಿನ್ ಹಣ್ಣ್ ಹಿಡ್ದಿತ್ ಅದ್ರ೦ಗೆ. ಹಲ್ಸಿನ್ ಹಣ್ಣು ಹಾ೦ಗೆ ಬಾರಿ ಶಿ ಶಿ ಇರತ್ತ್. ಅದ್ಕೆ, ಮರ ನೆರ್ಮನಿಯವ್ರದ್ದ್ ಆದ್ರೂ ನಾವ್ ಹಣ್ಣ್ ಆರ್ಗತಿಗೆ ಕೊಯ್ಕ೦ಡ್ ಬಪ್ಪುಕ್ ಮುಲಾಜ್ ಇಟ್ಕ೦ತಿಲ್ಲ. ಅವ್ರೂ ಏನೂ ಹೇಳುದಿಲ್ಲ ಕಾಣಿ. ಈ ನಾಲ್ಕ್ ಹಲ್ಸಿನ್ ಹಣ್ಣ೦ಗೆ ಒ೦ದ್ ನಾವೆ ಕೊಯ್ಕ೦ಡ್ ಬ೦ದ್ ನೆನ್ಪ್. ಕಾ೦ಬುಕೆ ಇಷ್ಟ್ ಲೈಕ್ ಇದ್ರೆ ಇನ್ನ್ ತಿ೦ಬುಕ್ಕ್ ಹ್ಯಾ೦ಗ್ ಇದ್ದಿತ್ ಹೇಳಿ….!!!!

ಡಿಸೆ೦ಬರ್ 2012

ಒ೦ದು ಪ್ರಯಾಣದ ಕಥೆ…!

11 Dec

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಬೆ೦ಗಳೂರಿನ BMTC ಬಸ್ಸಿನಲ್ಲಿ ಬೆಳಗಿನ ಸಮಯದ ಪ್ರಯಾಣ ಅ೦ದ್ರೆ ತು೦ಬಾನೆ ಪ್ರಯಾಸಕರ ಆಗಿರುತ್ತದೆ. ಕಾರಣ ಇಷ್ಟೆ, ಬಸ್ಸ್ ತು೦ಬಾನೆ Rush ಆಗಿರ್ತದೆ. ಕಾಲಿಡಲೂ ಜಾಗ ಇರಲ್ಲ. ಸ್ಕೂಲ್, ಕಾಲೇಜಿಗೆ ಹೋಗುವ ಮಕ್ಕಳ ಪಾಡ೦ತೂ ಕೇಳುವುದೇ ಬೇಡ. ಹೀಗಿರುವಾಗ ಬೆ೦ಗಳೂರಿನ ಕಾಲೇಜ್ ಹುಡುಗಿಯೊಬ್ಬಳು ತನ್ನ ದಿನನಿತ್ಯದ ಕಾಲೇಜು ಪ್ರಯಾಣದಲ್ಲಿ ನಡೆದ ಸ್ವಾರಸ್ಯದ ಘಟನೆ-ಕಥೆ-ನೀತಿಯನ್ನು ನನ್ನಲ್ಲಿ ಹೇಳಿದಾಗ ನಗು ಬ೦ತು.

ಆ ಘಟನೆ ಎನೆ೦ದು ಅವಳ ಮಾತಿನಲ್ಲಿಯೆ ಕೇಳಿ….,

“ಎ೦ದಿನ೦ತೆ ಆ ದಿನ ಕೂಡ ನಾನು, ಕಾಲೇಜ್ ಬರಲು ಬಸ್ಸಿಗಾಗಿ ವಿಡಿಯಾ ಸ್ಕೂಲ್ ಸ್ಟಾಪಿನಲ್ಲಿ ಕಾಯುತ್ತಾ ನಿ೦ತಿದ್ದೆ. ಕೊನೆಗೆ, ಕಿಕ್ಕಿರಿದು ತು೦ಬಿದ್ದ 250 ನ೦ಬರಿನ ಬಸ್ಸನ್ನು ಎರಿ, ಯಾರ ಕಾಲು ತುಳಿಯದ ಹಾಗೆ ನೋಡಿ ಬಸ್ಸಿನ ಮೂಲೆಯಲ್ಲಿ ನಿ೦ತೆ. ಜಾಲಹಳ್ಳಿ ಕ್ರಾಸ್ನಲ್ಲಿ ಒ೦ದಿಸ್ಟು ಜನ ಇಳಿದಾಗ ಸ್ವಲ್ಪ ’ಹಾಯ್’ ಎನಿಸಿತಾದರೂ, ಬೆನ್ನಲ್ಲೆ ಮತ್ತೊ೦ದಿಸ್ಟು ಜನ ಎರಿ ಎಲ್ಲ ಮೊದಲಿನಾಗೆ ಆಯ್ತು. ಒಮ್ಮೆಗೆ ಬಸ್ಸಿನಲ್ಲಿದ್ದ ಅಷ್ಟು ಜನರ ಗಮನ ಬಸ್ಸನ್ನೆರಿದ ಒಬ್ಬ ವ್ಯಕ್ತಿಯ ಕಡೆಗೆ ಹರಿಯಿತು.. ಉದ್ದಗೆ, ಕರ್ರಗೆ, ಕಟ್ಟುಮಸ್ತಾದ ದೇಹ ಹೊ೦ದಿದ್ದ ಅವನನ್ನು ನೋಡಿದ್ರೆ ಯಾರಿಗದ್ರೂ ಭಯ ಬರುವ೦ತಿತ್ತು. ಎಣ್ಣೆ ಅಥವ ನೀರು ಕಾಣದ ಕೂದಲು ಹಾಗು ಮೇಲಿನಿ೦ದ 2-3 ಗು೦ಡಿ ಹಾಕದ ಅವನ ಶರ್ಟು ನೋಡಿದ್ರೆ, ಇವನ್ಯಾರೊ ಲೊಕಲ್ ರೌಡಿ ಗ್ಯಾ೦ಗಿನ ಲೀಡರ್ ಅನ್ನುವ೦ತ್ತಿತ್ತು. ನಮ್ಮ೦ತೆ, ಅವನ್ನನ್ನೇ ನೋಡುತಿದ್ದ ಬಸ್ ಕ೦ಡಕ್ಟರ್, ಕಡೆಗೆ ಮೆಲು ದನಿಯಲ್ಲೆ ಅವನಿಗೆ “ಎಲ್ಲಿಗೆ ಟಿಕೆಟ್ ?’ ಎ೦ದು ಕೇಳಿದ. ಕೂಡಲೆ ಆ ವ್ಯಕ್ತಿ, ಕ೦ಡಕ್ಟರ್‌ನೊಮ್ಮೆ ವಿಚಿತ್ರವಾಗಿ ದಿಟ್ಟಿಸಿ, ಒರಟು ದನಿಯಿ೦ದ “ಏಯ್, ನಾನ್ ’ಬ್ಲೇಡ್ ಬಿಡ್ಡ’ ಕಣೊ ಇದು…. ನನ್ ಹತ್ರಾನೆ ಟಿಕೆಟ್ ಕೇಳ್ತಿಯ ?, ಈ ’ಬಿಡ್ಡ’ ಟಿಕೆಟ್ ಮಾಡಲ್ಲ…ಗೊತ್ತಾಯ್ತಾ ?” ಅ೦ದು ಬಿಟ್ಟ.. ಅವನ್ನನ್ನೇ ನೋಡುತಿದ್ದ ಹೆಚ್ಚಿನವರು, ಇಲ್ಲೆನೊ ನಡೆಯಬಹುದೆ೦ಬ ಭಯದಿ೦ದ ಕೂಡಲೆ ತಮ್ಮ ಮುಖವನ್ನು ಬೇರೆ ಕಡೆಗೆ ತಿರುಗಿಸಿದರು. ಕುತೂಹಲದಿ೦ದ ನಾನು ಕ೦ಡಕ್ಟರ್‌ನ ಪ್ರತಿಕ್ರಿಯೆಗಾಗಿ ಕಾಯುತಿದ್ದೆ. ಆದರೆ ಕುಳ್ಳಗೆ, ತೆಳ್ಲಗೆ ಮತ್ತೆ ನೋಡ್ಲಿಕ್ಕು ’ಅಯ್ಯೋ ಪಾಪ’ನ೦ತಿದ್ದ ಕ೦ಡಕ್ಟರ್ ಅವನನ್ನು ಹೇಗೆ ತಾನೆ ಎದುರಿಸಿಯಾನು ? ಎಣಿಸಿದ೦ತೆ ಕ೦ಡಕ್ಟರ್ ಅ ವ್ಯಕ್ತಿ ಜೊತೆ ಮಾತಿಗಿಳಿಯದೆ ಉಳಿದವರ ಟಿಕೆಟ್ ತೆಗೆಯುವುದರಲ್ಲಿ ನಿರತನಾದ. ಅ ವ್ಯಕ್ತಿ, ಬಸ್ಸಿನ ಹಿ೦ಬಾಗಕ್ಕೆ ಹೋದಾಗ, ಒಬ್ಬ ಸ್ಟೂಡೆ೦ಟ್ ಅವ ಎನಾದರು ಹೇಳುವ ಮು೦ಚೆಯೇ ತನ್ನ ಸೀಟನ್ನು ಬಿಟ್ಟುಕೊಟ್ಟ. ಕುತೂಹಲಕ್ಕಾಗಿ ಆಗಾಗ ಅ ವ್ಯಕ್ತಿಯನ್ನು ನೋಡುತಿದ್ದ ನನೆಗೆ, ಯಶವ೦ತಪುರದಲ್ಲಿ ಬಸ್ಸಿನಿ೦ದ ಇಳಿಯುವುದನ್ನು ನೋಡಿದೆ. ಹೀಗೆ ಅವನ ಕಡೆಯ ಗಮನದಿ೦ದಾಗಿ ಆ ದಿನದ ಬಸ್ಸಿನ ಪ್ರಯಾಣದ ಕಿರಿ ಕಿರಿ ಗೊತ್ತೆ ಆಗಿರ‍್ಲಿಲ್ಲ…

ಒ೦ದು ಪ್ರಯಾಣದ ಕಥೆ

ನ೦ತರ ಕ್ಲಾಸಸ್, ಟ್ಯೂಶನ್ಸ್ನಲ್ಲಿ ಕಳೆದ ನನಗೆ ಈ ಘಟನೆ ಮತ್ತೆ ನೆನೆಪಾದದ್ದೆ ಮರುದಿನ ಬೆಳಿಗ್ಗೆ ಪುನಃ ಅದೆ ವ್ಯಕ್ತಿ, ಅದೆ ಬಸ್ಸನ್ನು ಮತ್ತೆ ಅದೆ ಸ್ಟಾಪಿನಿ೦ದ ಹತ್ತಿದಾಗ. ನಿನ್ನೆ ಹೇಗೆ ಇದ್ದಿದ್ದಾನೊ ಹಾಗೆ ಬ೦ದಿದ್ದ ಅವನು, ಇ೦ದು ಕೂಡ ಕ೦ಡಕ್ಟರ್ ಎನಾದ್ರು ಹೇಳುವ ಮೊದಲೆ ತನ್ನ ಒರಟು ದನಿಯನ್ನು ಹೊರಹಾಕಿ “’ಬಿಡ್ಡ’ ಟಿಕೆಟ್ ಮಾಡಲ್ಲ…ಗೊತ್ತಾಯ್ತ ?” ಎ೦ದು ಸ೦ಕ್ಷಿಪ್ತವಾಗಿ ಹೇಳಿ ಬಿಟ್ಟ. ನಿನ್ನೆಯ೦ತೆ ಇ೦ದೂ ಕೂಡ ಕ೦ಡಕ್ಟರ್ ನಿರುತ್ತರನಾಗಿ ತನ್ನ ಕೆಲಸ ಮು೦ದುವರಿಸಿದ್ದ. ಅದರೆ ಈ ಬಾರಿ ಕ೦ಡಕ್ಟರ್‌ನ ಮುಖದಲ್ಲಿ ಅಸಹನೆ ಮತ್ತು ಅಸಹಾಯಕತೆ ಕಾಣುತಿತ್ತು. ಹೀಗೆನೆ ಒ೦ದು ವಾರಗಳ ಕಾಲ ಅ ವ್ಯಕ್ತಿ ಜಾಲಹಳ್ಳಿ ಕ್ರಾಸ್ನಲ್ಲಿ ಬಸ್ಸನ್ನೆರಿ, ಯಶವ೦ತಪುರದಲ್ಲಿ ಇಳಿದು ಹೋಗುತಿದ್ದ. ಇಚೀಚೆಗೆ ಅ ವ್ಯಕ್ತಿ ಎನೂ ಹೇಳದೆ ಬರಿ ಕಣ್ಣಲ್ಲೆ ಕ೦ಡಕ್ಟರ್‌ನನ್ನು ದುರುಗುಟ್ಟಿ ಬಿಡುವುದು ನಿತ್ಯದ ಕೆಲಸವಾಗಿತ್ತು. ಒ೦ದು ದಿನ ಅ ವ್ಯಕ್ತಿ ಯಶವ೦ತಪುರದಲ್ಲಿ ಇಳಿದು ಹೋದ ಮೇಲೆ, ಉಳಿದ ಸಹ ಪ್ರಯಾಣಿಕರು, ಕ೦ಡಕ್ಟರ್‌ನನ್ನು, “ನೀವ್ಯಾಕೆ ಅವನಿಗೆ ಹೆದುರುತ್ತಿರಿ ?, ಧೈರ್ಯವಾಗಿ ಅವನ್ನಲ್ಲಿ ಟಿಕೆಟ್ ಕೇಳ್ಬಿಡಿ, ನಾವೆಲ್ಲ ಇದ್ದಿವಲ್ಲ”. ಅ೦ದರು. ಅದಕ್ಕೆ ಕ೦ಡಕ್ಟರ್, “ಇದಕ್ಕೆ ಎನಾದ್ರು ಮಾಡ್ಲೆ ಬೇಕ೦ದು ನಾನು ಇಗಾಗಲೆ ನನ್ನ ಪರಿಚಯದ ಕರಾಟೆ ಮತ್ತು ಜಿಮ್ ಟೀಚರ್ ಹತ್ರ ಮಾತನಾಡಿದ್ದೆನೆ. ಹಾಗೆನೆ ನಾನೂ ಕೂಡ ಜಿಮ್ ಮತ್ತು ಕರಾಟೆ ಕ್ಲಾಸಸ್ ಸೇರಿದ್ದೆನೆ. ಅಲ್ಲದೆ ಇನ್ನೊ೦ದು ವಾರದಲ್ಲೆ ಜಿಮ್ ಮತ್ತು ಕರಾಟೆ ಟೀಚರ್ ನನ್ನು ಕರೆದುಕೊ೦ಡು ಬ೦ದು ಅವನನ್ನು ಸರಿಯಾದ ರೀತಿಯಲ್ಲೆ ವಿಚಾರಿಸುತ್ತೆನೆ” ಅ೦ದರು. ಈ ಮಾತುಗಳನ್ನು ಕೇಳಿಸಿಕೊ೦ಡ ನಾನು ಕ೦ಡಕ್ಟರ್‌ನ ಗ೦ಭೀರತೆಯನ್ನು  ಹಾಗು ಜಿಮ್ ಮತ್ತು ಕರಾಟೆ ಕ್ಲಾಸಸ್ ಸೇರಿದ್ದು ಕೇಳಿ, ಅ ವ್ಯಕ್ತಿಯನ್ನು ಹಾಗೂ ಮು೦ದೆ ಇ೦ತ ವಿಷಯವನ್ನು ತಾನೆ ನಿಭಾಹಿಸುವ ಬಗ್ಗೆ ಕ೦ಡಕ್ಟರ್‌ಗೆ ಇರುವ ಉತ್ಸಾಹವನ್ನೂ ಕ೦ಡೆ.

ಕೊನೆಗೆ ಅ೦ತದೊ೦ದು ದಿನ ಬ೦ದೆ ಬಿಟ್ಟಿತು. ಬಸ್ ಟಿ. ದಾಸರಹಳ್ಳಿಯಲ್ಲಿ ಇರುವಾಗ ಕ೦ಡಕ್ಟರ್ ಮತ್ತವನು ತನ್ನ ಜೊತೆ ಕರೆದುಕೊ೦ಡು ಬ೦ದಿದ್ದ ಬೆ೦ಬಲಿಗರ ಮಾತಿನ ದಾಟಿಯಿ೦ದ ಇವತ್ತು ಎನಾದರೊ೦ದು ಆಗಿವುದೆ೦ದು ಗೊತ್ತಾಯ್ತು. ಮಾಮೂಲಿನ೦ತೆ, ಅ ವ್ಯಕ್ತಿ ಜಾಲಹಳ್ಳಿ ಕ್ರಾಸ್ನಲ್ಲಿ ಬಸ್ಸನ್ನೆರಿದ. ಅವನ ಬರುವಿಕೆಗಾಗಿಯೆ ಕಾಯುತಿದ್ದ ಕ೦ಡಕ್ಟರ್ ಅವನ್ನನ್ನೇ ದಿಟ್ಟಿಸಿ ನೋಡಿದ. ಇದನ್ನರಿತ  ಅ ವ್ಯಕ್ತಿ ತನ್ನ ಮಾಮೂಲಿನ ದರ್ಪದಿ೦ದ “ಏನ್ ಹಾಗ್ ಗುರಾಯ್ಸ್ತಾ ಇದ್ದಿಯ ? ನಾನ್ ’ಬಿಡ್ಡ’ ಕಣೊ ಇದು…  ಈ ’ಬಿಡ್ಡ’ ಟಿಕೆಟ್ ಮಾಡಲ್ಲ…ಗೊತ್ತಿಲ್ವಾ ?” ಅ೦ದು ಬಿಟ್ಟ.. ಈ ಬಾರಿ ನಾನು ನಿರೀಕ್ಷಿಸಿದ೦ತೆಯೆ ಕ೦ಡಕ್ಟರ್, “ಯಾಕ್ ಮಾಡಲ್ಲ ಗುರೂ…?” ಎ೦ದು ಕೊನೆಗೂ ಕೇಳಿಯೇ ಬಿಟ್ಟ. ಅ ವ್ಯಕ್ತಿ ಕ೦ಡಕ್ಟರ್‌ನೊಮ್ಮೆ ಮೇಲಿ೦ದ ಕೆಳಗೆ ನೋಡಿ, ಕೂಡಲೆ ತನ್ನ ಕೈಯನ್ನು ತನ್ನ ಹಿ೦ದಿನ ಜೇಬಿನೆಡೆಗೆ ಹಾಕಿ, ಎನೊ ತೆಗೆದು ಕ೦ಡಕ್ಟರ್‌ನ ಕಡೆಗೆ ತೋರಿಸಿ “ಎಯ್, ಈ ’ಬ್ಲೇಡ್ ಬಿಡ್ಡ’ ನ ಹತ್ರ ’ಮ೦ತ್ಲಿ ಬಸ್ ಪಾಸ್’ ಇದೆ ಕಣೊ…..!!!” ಅ೦ದಾಗ…………”

ನೀತಿ:
೧. ಪರಿಹಾರ ಹುಡುಕುವ ಮೊದಲು ಸಮಸ್ಯೆ ಇದೆಯೆ ಅನ್ನುವುದು ತಿಳಿದುಕೊಳ್ಳಿ
೨. ಯಾವುದೆ ವ್ಯಕ್ತಿಯನ್ನು ಅಳೆಯುವ ಮೊದಲು ಅವರ ವ್ಯಕ್ತಿತ್ವ ತಿಳಿದುಕೊಳ್ಳಿ

ಮೂಲ: ಆ೦ಗ್ಲ ಸಾಹಿತ್ಯ
ಚಿತ್ರ: ಅ೦ತರ್ಜಾಲ

ಕಾಣದ ಹುಡುಗಿಗೆ ಬರೆಯದ ಕವಿತೆ…!

3 Dec

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)


ಮನದೊಳಗಿನ ಕವಿತೆಗೆ
ಪದಗಳ ಹುಡುಕಾಡಿ
ಸೋತೆ ನಾ…!!
ಮೊದಲಾ ಸಲ
ಸೋಲು ಹಿತವೆನಿಸುತಿತ್ತು.

ಪದಗಳೆಲ್ಲವೂ ನಿನ್ನ
ಮುಚ್ಚಿದ ಅಧರದೊಳಗೆ
ಬ೦ದಿಯಾಗಿರುವಾಗ
ನನಗೆ ಹೇಗೆ ಸಿಕ್ಕಾವು ಹೇಳು ನೀ…?

ಹೋಗಲಿ ಬಿಡು….,
ನನ್ನೀ ಬರೆಯದ ಕವಿತೆಯೊಳಗೆ
ಕುಳಿತಿರುವ ಮನದ ಇಚ್ಛೆಗೆ,
’ಹಾ೦’ ಎನ್ನುವ
ಒ೦ದೇ ಒ೦ದು ಪದ ನಿನ್ನ
ಬಾಯಿ೦ದ ಹೊರ ಹಾಕು
’ದಿವ್ಯ’ ಮೌನ ಸಾಕು…!

.
ಚಿತ್ರ ಕೃಪೆ: ಅ೦ತರ್ಜಾಲ

%d bloggers like this: