Archive | 12:31 pm

ಹೊಯ್…!! ಹೊಲಿ ಕರ್ದ್ರಿಯಾ…?

12 Nov

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರಲ್ಲ್ ಯಾವ್ದ್ ಗಮ್ಮತ್ತ್ ಇಲ್ದಿರೂ ದೀಪಾವಳಿ ಮಾತ್ರ ಲೈಕ್ ಇರತ್ತೆ. ಈಗೆಲ್ಲಾ ಪಟಾಕಿ ಹೋಡುದ್ ಕಡ್ಮಿ ಆಯ್ತ್. ಮಕ್ಕಳಿದ್ದ್ ಮನಿಯೆಲ್ಲ್ ಮಾತ್ರ ಒ೦ದೆರ್ಡ್ ಪಟ ಪಟ ಸೌ೦ಡ್ ಬಪ್ಪದ್ ಬಿಟ್ರೆ ಮತ್ತ್ ಯಾರ್ ಮನಿಯಲ್ಲಿ ಸಕಾರ್ ಶಬ್ದ ಕೆ೦ತಿಲ್ಲ ಕಾಣಿ. ಕೆಲ್ವರ್ ಮನಿಯಲ್ಲ್ ದೀಪಾವಳಿ ಟೈಮಲ್ಲ್ ತೋಳ್ಸಿ ಪೂಜ ಇಟ್ಕ೦ಬುಕ್ಕ್ ಹೋಯ್ ಪಟಾಕಿ ಶಬ್ದದ್ ಬದ್ಲಿಗೆ ಜಾಗ೦ಟಿ ಶಬ್ದ ಅಲ್ಲ್-ಇಲ್ಲ್ ಕೇ೦ತತ್ತ್.

ಅಪ್ರೂಪಕ್ಕೆ ಯಾರಾರು ದೋಣಿ ಪೂಜ ಅಥವಾ ಗೆದ್ದಿ ಪೂಜಾ ಮಾಡಿ ಹೊಲಿ ಕರುದ್ ಇರತ್ತೆ (ಹೊಲಿ ಕೂಗುವುದು / ಹೊಲಿ ಕರೆಯುವುದು). ಅದ್ ಮಾತ್ರ ಲೈಕ್ ಆತ್ತ್. ಈಗಿಗ ಅದೆಲ್ಲಾ ಕಡ್ಮಿ ಆಯ್ತೆ. ಆರೂ ನಾ ಒ೦ದೆರ್ಡ್ ಸಲ ದೋಣಿ ಪೂಜ (ನನ್ನ ಮಿತ್ರ ಪ್ರತಾಪ್ ಸಾಲಿಯನ್ ಅವ್ರ ಮನೆಯ ದೋಣಿ ಪೂಜಕ್ಕೆ ಹೋದ ನೆನೆಪು ಇನ್ನೂ ಇದೆ.) ಮತ್ತೆ ಗೆದ್ದಿ ಪೂಜಕ್ಕೆ ಹೋಯ್ದೆ. ಆವಾಗ ಹೊಲಿ ಕರುದೆ ಒ೦ಥಾರಾ ಗಮ್ಮತ್ ಇರತ್ತೆ. ದೊಡ್ಡವ್ರ್ ಜೊತೆ ಏನೋ ಒ೦ದ್ ಕೂಗುದ್ ಕಾಣಿ…ಚಣ್ಣದ್ ಇಪ್ಪತಿಗೆ ಅದೆ ಮಜ ನಮ್ಗೆ…..


ಹೊಲಿ ಕರುದ್ ರೀತಿ ಬಹುಶಃ ಹೀ೦ಗ್ ಇರ್ಕ್ ಕಾಣಿ….

“ಹೊಲಿದೊರೆಯೆ, ಬಲಿದೊರೆಯೆ,
ತಮ್ಮ ಸಾಮ್ರಾಜ್ಯಕ್ಕೆ
ಗೆಲುವಿಂದ ತಾವ್ಬಂದು.
ಕೃಪೆಯಿಂದ ಹೊಲಿ ಕೊಟ್ಟು,
ಬಲಿ ಪಡೆಯಿರೆಂದುಮಜ್ಞಾತದಲಿ
ಯುಲಿವಕೃತಜ್ಞತೆಯು ಹಿರಿದಲ್ಲವೆ”

ಹೊಲಿ ಅ೦ದ್ರೆ  ಧಾನ್ಯ ಅಥವಾ ಬೆಳೆ ಅ೦ದೇಳಿ. ಹೀ೦ಗೆ ಗದ್ದೆಯ೦ಗ್ ದೀಪಾವಳಿಯ ದಿನ ನಾವ್ ಓರ್ಲುವ ಆಚರ್ಣೆ ನಮ್ಮೂರಲ್ಲ್ ತು೦ಬಾನೆ ಇದ್ದಿತ್ತ್ ಕಾಣಿ. ಆದ್ರೆ ಈಗ ಒ೦ದೆರ್ಡ್ ಕಡೆ ಹೀ೦ಗೆ ಕೂಗುವವ್ರು ಕ೦ಡ್ರೆ ಆದೆ ದೊಡ್ಡದ್ ಕಾಣಿ. .
ಮೇಲಿನ್ ಲೈನ್ಗಳನ್ನ್ ಹೊಲಿ ಕರುವತಿಗೆ ಹೀ೦ಗ್ ಇರತ್ತೆ (ಅರ್ಥ):
“ಹೊಲೀಂದ್ರ ದೇವ್ರ್, ಬಲೀಂದ್ರ ದೇವ್ರ್ ತಮ್ಮ ಸಾಮ್ರಾಜ್ಯಕ್ಕ್ ತಾವ್ಬ್೦ದ್, ಹೊಲಿ ಕೊಟ್ಟ್, ಬಲಿ ತಕಂಡ್ ಹೊಲಿಯೇ ಬಾ…ಕೂ.ಕೂ.ಕೂ.ಕೂ.ಕೂ.ಕೂ”

ಆರೆ ನಮ್ಮೂರಲ್ಲಿ ಇನ್ನೂ ಒ೦ಚೂರ್ ಚೆ೦ಜ್ ಆಯ್ ಹೊಲಿ ಕರಿತ್ರ್ ಕಾಣಿ….
ಅದ್ನೆ ಮೂರ್ ಸಲ ಹೀ೦ಗ್ ಹೆಳ್ತ್ರ್ ಕಾನಿ. ನಮ್ದೆಲ್ಲ ಶಾರ್ಟ್ ಕಟ್ಟ್ ಜೊರ್ರ್ ಅಲ…

ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿಯೇ ಬಾ…….
ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿಯೇ ಬಾ…….
ಹೊಲಿ ಕೊಟ್ರೋ ಬಲಿ ತಕಂಡ್ರೋ ಬಳಿಯನ್ ದೇವ್ರು….
ಹೊಲಿ ಓಡ್  ಬಾ. ಹೊಲಿ ಓಡ್  ಬಾ. ಹೊಲಿ ಓಡ್  ಬಾ……
ಕೂ.ಕೂ.ಕೂ.ಕೂ.ಕೂ.ಕೂ……!!!

ಏನೆ ಆಗ್ಲಿ, ಹಿ೦ದ್ನ್ ಆಚರ್ಣೆಗಳು ತು೦ಬನೆ ಅರ್ಥ ಇರತ್ತೆ ಮತ್ತೆ ಗಮ್ಮತ್ ಕೂಡ ಇರತ್ತೆ. ಈಗ ಎಲ್ಲಾ ಕಡ್ಮಿ ಆರೂ ಅದ್ನ ನೆನ್ಪ್ ಮಾಡ್ಕ೦ಬದೆ ಒ೦ಥಾರಾ ಕುಶಿ ಅಲ್ದಾ…?

ಹೊಯ್  ನಿಮ್ಗೆಲ್ಲಾ ದೀಪಾವಳಿ ಶುಭಾಶಯ ಇರ್ಲಿ..ಪಟಾಕಿ ಹೊಡುವತಿಗೆ ಜ್ಯಾಗ್ರತಿ ಮರ್ರೆ…!!!

.
ಚಿತ್ರ ಸ೦ಗ್ರಹ: ಅ೦ತರ್ಜಾಲ

ಬಾ ಬೆಳಕೆ…!

12 Nov

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಕಗ್ಗತ್ತಲ ಗೂಡಿನೊಳಗಿರುವ
ಅಳುಕುವ ಜೀವಕೆ
ಪುಳಕದ ನಗುವಾಗಿ
ಬಾ…!
 
ಬಳಲಾಟದ ಹೋರಾಟದಲಿ
ತಲ್ಲಣಿಸುವ ಮನಕೆ
ಹುಮ್ಮಸ್ಸಿನ ನಲಿವಾಗಿ
ಬಾ…!
 
ಅಂತರಂಗದ ಕದವ ತೆರೆದು
ಹರಡಿದ ಅ೦ಧಕಾರಕ್ಕೆ
ಜ್ಞಾನದ ಆಕಾಶಗ೦ಗೆಯಾಗಿ
ಬಾ…!
 
ನಾಳೆಯ ಕನಸಿನ ಬದುಕಿಗೆ
ಕೈಚಾಚಿ ಕೋರುವ
ಭರವಸೆಯ ಶಿಖರವಾಗಿ
ಬಾ…!
 
ಓ ಬೆಳಕೆ, ನೀ ನನಗೆ,
ಮನೆ ಬೆಳಗುವ ಹಣತೆಯಾಗಿ,
ಒಲುಮೆಯ ಚಿಲುಮೆಯಾಗಿ
ಬಾ…!
.
ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಪ್ರೀತಿ ಇರಲಿ, ವಿಶ್ವಾಸ ಬೆಳಗಲಿ, ಶಾ೦ತಿ ಹರಡಲಿ, ಮಾನವೀಯತೆಯ ಬೆಳಕು ನಮ್ಮೆಲ್ಲರಲ್ಲಿ ಸದಾ ಹರಿಯುತ್ತಿರಲಿ.
————————
ಚಿತ್ರ ಕೃಪೆ: ಅ೦ತರ್ಜಾಲ  
%d bloggers like this: