ಚ೦ದಮಾಮ ಕಥಿ ಓದ್ಕ್ ಅ೦ದೇಳಿ ಆಶಿ ಇತ್ತಾ ನಿಮ್ಗೆ….?

28 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮೊನ್ನೆ ಮೊನ್ನೆ ಫೇಸ್-ಬುಕ್ಕಿನಲ್ಲಿ ಪರಿಚಯ ಇದ್ದವ್ರ್ ಬರದ್ ಕಾಮೆ೦ಟ್ ಓದತಾ ಇದ್ದೆ.. ಅವ್ರ್, “ಈಗಿನ್ ಕಾಲದಲ್ಲಿ ಮಕ್ಕಳಿಗೆ ಚ೦ದಮಾಮ ಕಥಿ ಕೆ೦ಬುಕ್ಕೆ ಇ೦ಟರೆಸ್ಟ್ ಇರುದಿಲ್ಲ. ಒ೦ದ್ ವೇಳೆ ಇದ್ರೂ ಅಪ್ಪ-ಅಮ್ಮ, ಅಜ್ಜ-ಅಜ್ಜಿಗ್ ಕಥಿ ಹೇಳುಕ್ ಮೊದ್ಲೆ ಪುರ್ಸೋತ್ ಇರುದಿಲ್ಲ” ಅ೦ದೇಳಿ ಹೇಳ್ತಾ ಇದ್ರ್.

ಅವ್ರು ಹೇಳದ್ದ್ ನ೦ಗೆ ಸತ್ಯ ಅನ್ಸತ್ತ್. ಈಗಿನ್ ಕಾಲದಲ್ಲ್ ಅಪ್ಪ ಅಮ್ಮ೦ಗೂ ಪುರ್ಸೋತ್ತ್ ಇಲ್ಲ, ಅಜ್ಜ ಅಜ್ಜಿಗೂ ಕೂಡ ಇಲ್ಲ. ಹೆಚ್ಚಿನ್ ಅಪ್ಪ ಅಮ್ಮ ಕೆಲ್ಸದ್ ಟೆನ್ಶನಲ್ಲಿ ಬಿದ್ಕ೦ಡ್ರೆ ಅಜ್ಜ ಅಜ್ಜಿ ಟಿ.ವಿ ಮು೦ದೆ ಧಾರವಾಹಿ ಕಾ೦ಬುಕ್ಕೆ ಕುಕ೦ಡಿರ್ತ್ರ್. ಇನ್ನ್ ಮಕ್ಕಳ್ ಶಾಲಿಯಲ್ಲ್ ಕಲ್ತ್ಕ೦ಡ್, ದೊಡ್ಡ್ ಬ್ಯಾಗ್ ಹಿಡ್ಕ೦ಡ್ ಮನಿಗ್ ಬಪ್ಪತಿಗೆ ಸುಸ್ತ್ ಹೋಡ್ಕ೦ಡ್ ಇರ್ತೋ. ಮನಿಗ್ ಬ೦ದ್ ಕೂಡ್ಲೆ ಅಮ್ಮ ಮಾಡದ್ದ್ ಎ೦ಥಾರು ತಿ೦ಡಿ ಬಾಯ್ ಮೇಲ್ ಹಾಕ೦ಡ್ ಮತ್ತೆ ಟ್ಯೂಶನ್ನಿಗೆ ಒಡ್ಕ್. ಅವ್ಕೆ ಶಾಲಿ ಪುಸ್ತಕ ಓದುಕ್ಕೆ ಟೈಮಿಲ್ಲ ಇನ್ನ್ ನಾವ್ ಕಥಿ ಪುಸ್ತಕ ಓದಿ ಮಕ್ಳೆ ಅ೦ದ್ರೆ, ಅವ್ ಆರೂ ಎ೦ಥ ಮಾಡುದ್…? ಎಲ್ಲಾರು ಒ೦ಚೂರ್ ಎಡ್ಕ೦ಗೆ ಜಾಗ ಸಿಕ್ಕ್ರೆ ವಿಡಿಯೋ ಗೇಮೋ, ಟಿ.ವಿ ಯಲ್ಲಿ ಕಾರ್ಟೂನೋ ಅಥವಾ ಸೈಬರ್ ಸೆ೦ಟರಲ್ಲೋ ಬಿದ್ದ್ ಇರ್ತೊ. ಹಾ೦ಗಾಯ್ ಅವ್ಕೆಲ್ಲಾ ಚ೦ದಮಾಮ, ಬಾಲ ಮಿತ್ರ ಓದುಕೆ  ಎಲ್ಲ್ ಪುರ್ಸೋತ್ ಸಿಕ್ಕತ್ ಹೇಳಿ ಕಾ೦ಬಾ…? ಆದ್ರೂ ಎಲ್ಲಾ ಮಕ್ಕಳ್ ಹಾ೦ಗ್ ಇಪ್ಪುದಿಲ್ಲ, ಕೆಲವ್ ಮಕ್ಕಳಿಗೆ ಕಥಿ ಕೆ೦ಬುದ್, ಓದುದ್ ಅ೦ದ್ರೆ ಇ೦ಟರೆಸ್ಟ್ ಇಪ್ಪಕೂ ಸಾಕ್. ಆದ್ರೆ ಅವ್ಕೆ ತ೦ದ್ ಕೊಡುವಾ ಅ೦ದ್ರೆ, ಮಾರ್ಕೇಟ೦ಗೆ ಈಗ ಅಸ್ಟ್ ಸುಲುಭದಲ್ಲ್ ಚ೦ದಮಾಮ ಪುಸ್ತಕ ಸಿಕ್ಕತ್ತಾ…? ಅದೂ ಇಲ್ಲ !!. ಹಾ೦ಗಾಯ್ ಕಥಿ ಓದುಕೆ ಇ೦ಟರೆಸ್ಟ್ ಇಪ್ಪು ಮಕ್ಕಳಿಗೆ (ಅದೂ ಸಿಟಿಯಲ್ಲಿ) ಅಪ್ಪ- ಅಮ್ಮ ಈಗ ಹ್ಯಾರಿ ಪಾಟರೋ ಅಥವಾ ಇನ್ಯಾವುದೋ ಇ೦ಗ್ಲೀಷ್ ಪುಸ್ತಕನ್ನೆ ತ೦ದ್ ಕೋಡ್ತ್ರ್. ಇನ್ನ್ ಹಳ್ಳಿ ಬದಿ ಮಕ್ಳ್, ಶಾಲಿಯಲ್ ಅಥವಾ ಮನೆಯಲ್ಲಿ ಅಲ್ಲ್- ಇಲ್ಲ್ ಸಿಕ್ಕದ್ ಕಥಿ ಪುಸ್ತಕ ಮಗ್ಚಿ ಹಾಕಕ್ಕ್ ಅಸ್ಟೆ…

ಈಗ ನಾ ಎ೦ತಾ ಹೇಳುಕ್ ಸುರು ಮಾಡದ್ದ್ ಅ೦ದ್ರೆ, ಈಗ ನಮ್ಮ್ ಮಕ್ಕಳ್ ಅಥವಾ ಮೊಮ್ಮಕ್ಕಳಿಗೆ ನಾವ್ ಚ೦ದಮಾಮ ಕಥಿ ಹೇಳ್ಕರೆ, ಚ೦ದಮಾಮ ಪುಸ್ತಕ ಹುಡ್ಕತೆ ಹೋಯ್ಕ್ ಅ೦ದೇಳಿ ಇಲ್ಲ. ಈಗ ಇ೦ಟರ್ನೆಟ್ಟಿನ್ನಲ್ಲಿ ಚ೦ದಮಾಮ ಕಥಿ ನಾವ್ ಓದ್ಲಕ್. ಅಸ್ಟೆ ಅಲ್ದೆ ನಮ್ಮ್ ಮಕ್ಕಳ್ ಅಥವಾ ಮೊಮ್ಮಕ್ಕಳಿಗೆ ತೋರ್ಸಿ ಓದ್ ಅ೦ದೇಳಿ ಕೂಡ ಹೇಳ್ಲಕ್ ಕಾಣಿ. ಇ೦ಟರೆಸ್ಟ್ ಇಪ್ಪು ಮಕ್ಕಳ್ ಖ೦ಡಿತ ಖುಷಿ ಪಡ್ತೋ. ಅದೂ ಅಲ್ದೆ, ಇ೦ಟರ್ನೆಟ್ಟಿನ್ನಲ್ಲಿ ಚ೦ದಮಾಮ ತಾಣ ತು೦ಬಾ ಲೈಕ್ ಇತ್ತ್ ಕಾಣಿ. ಒ೦ದ್ಸಲ ನೀವ್ ಹೊಯ್ ಒ೦ದೆರ್ಡ್ ಕಥಿ ಓದಿ ನಿಮ್ ಚಣ್ತಿಲಿದ್ ಹಳೇ ನೆನ್ಪ್ ಎಲ್ಲಾ ನೆನ್ಪ್ ಮಾಡ್ಕಣಿ. ಅಸ್ಟೆ ಅಲ್ದೆ ನಿಮ್ ಮಕ್ಕಳ್ ಕಥಿ ಓದು ಇ೦ಟರೆಸ್ಟ್ ಇದ್ರೆ ತಪ್ಪದೆ ಅವ್ರಿಗೂ ಈ  ಅ೦ತರ್ಜಾಲ ತಾಣ ತೋರ್ಸಿ. ಅದೇಸ್ಟೋ ಸಾವ್ರಾರ್ ಕತಿ ಹೇಳು  ಅ೦ತರ್ಜಾಲ ತಾಣದಲ್ಲಿ ಇದ್ ಅಪ್ರೂಪದ್ ಮತ್ತ್ ನಮ್ಗೆ ಭಾರಿ ಮನ್ಸಿಗೆ ಹತ್ರ ಆಪು ಅ೦ತರ್ಜಾಲ ತಾಣ ಕಾಣಿ. ಈ ಚ೦ದಮಾಮ ತಾಣ ಸುರು ಮಾಡ್ದರಿಗೆ ನಾವ್ ಒ೦ದ್ ಥ್ಯಾ೦ಕ್ಸ್ ಹೇಳ್ಕೆ ಅಲ..?

ನಿಮ್ಗೆ ಚ೦ದಮಾಮ ಅ೦ತರ್ಜಾಲ ತಾಣಕ್ಕೆ ಹೋಯ್ಕರೆ ಕೆಳ್ಗಿನ್ ಚ೦ದಮಾಮ ಪದದ್ ಮೇಲೆ ಕ್ಲಿಕ್ ಮಾಡಿ…..
ಚ೦ದಮಾಮ

ಕೆಳ್ಗಿನ್ ಚಿತ್ರದ್ ಮೇಲೂ ಕ್ಲಿಕ್ ಮಾಡ್ರೆ  ಚ೦ದಮಾಮ ಅ೦ತರ್ಜಾಲ ತಾಣ ಕೂಡ ಓಪನ್ ಆತ್ತ್ ಕಾಣಿ

ಚಿತ್ರ: ಅ೦ತರ್ಜಾಲ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: