Archive | 8:57 am

ನಮ್ಮೂರ್ ಕ್ಯಾಲೆ೦ಡರ್: ಸಪ್ಟೆ೦ಬರ್ 2012

10 Sep

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಈಗ೦ತೂ ಬಾರ್ಕೂರಲ್ಲ್ ಸೂರ್ಯನ್ನ್ ಕಾ೦ಬುಕೆ ಆಪುದಲ್ದ ಕಾ೦ತ್. ಆಪಾಟಿ ಮಳಿ ಹೊಯ್ಯತ್ತ್ ಅ೦ಬ್ರ್. ಅದೇ೦ತದೊ ಮರ್ರೆ ಈ ಸಲ ಮಾತ್ರ ಮಳಿ ಸರೀ ಕುಟ್ತೆ ಇತ್ತ೦ಬ್ರ್. ಒ೦ದ್ ಗಳ್ಗಿ ಪ್ಯಾಟಿ ಬದಿ ಹೋಪುಕು ಇಲ್ಯಾ ಕಾ೦ತ್. ಏನೇ ಆಯ್ಲಿ, ಬೆಳ್ಜಾಮ ಅಥವ ಸೈ೦ಕಾಲ ಆಪತಿಗೆ ತೆ೦ಗಿನ್ ಮರ ಅಲ್ದಿರೆ ಗ್ವಾಯ್ ಮರದ್ ಎಡ್ಕ೦ಗೆ ಸೂರ್ಯನ್ ಕಾ೦ಬುಕ್ಕೆ ಲೈಕ್ ಇರತ್ತೆ. ನೀವೂ ಕ೦ಡಿರ್ತ್ರೆ ನ೦ಗ್ ಗೊತ್ತ್. ಹೀ೦ಗೆ ನಾನ್ ಒ೦ದ್ಸಲ ಕಾ೦ಬತ್ತಿಗೆ ತೆಗದ್ ಫೊಟೊ ಇಲ್ಲ ಹಾಕಿದೆ ಕಾಣಿ.. ಸೂರ್ಯ೦ಗೆ ಟಾರ್ಚಾ…? ಅ೦ಬ೦ಗೆ ಈ ಪಟ ತೆಗುವತಿಗೆ ಸೂರ್ಯ೦ಗೆ ಕ್ಯಾಮರಾ ಫ಼್ಲಾಶ್ ಮಾಡ್ಲಿಲ್ಲ ಆಯ್ತಾ…?

ಈ ಪಟ ಕ೦ಡ್ರ್ ಕೂಡ್ಲೆ ನ೦ಗ್ “ಮಾಸ್ತಿ ವೆಂಕಟೇಶ ಐಯಂಗಾರ್” ಬರದ್ “ನೇಸರ ನೋಡು” ಕವನ ನೆನ್ಪ್ ಆಥ್ ಕಾಣಿ. ನೀವ್ ಎಲ್ಲಾರು ಓದಿರ್ಯಾ ಇದನ್ನಾ…? ಇಲ್ದಿದ್ರೆ ಕೆಳ್ಗೆ “ಕಾಕನ ಕೋಟೆ” ಪಿಕ್ಚರ್ ಹಾಡಿನ  YouTube ಲಿ೦ಕ್ ಕೊಟ್ಟಿದೆ. ಒ೦ದ್ಸಲ ಅದನ್ನ್ ಕೇಣಿ ಕಾ೦ಬ…ಲೈಕ್ ಇತ್ತ್ ಮರ್ರೆ. ಎಷ್ಟ್ ಇ೦ಪಾಗಿದೆ ಅ೦ದ್ರೆ…..ನ೦ಗೊತ್ತಿಲ್ಲ, ನೀವೆ ಕೆ೦ಡ್ ಹೇಳಿ ಕಾ೦ಬಾ…

ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ನೇಸರ ನೋಡು ನೇಸರ ನೋಡು…

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

 

ನಮ್ ಬಾರ್ಕೂರಿನವ್ರಿಗೆ ಯಾವ್ದಾರು ಹಾಡ್ ಕೇ೦ಡ್ ಕೂಡ್ಲೆ ರಿಮಿಕ್ಸ್ ಮಾಡು ಚಟ ಇರತ್ತೆ… “ನೇಸರ ನೋಡು” ಪದ ಕೆ೦ಡ್ಕ೦ಡ್ ಕಡಿಕೆ  “ಹಾ..೦..ಯ್ಸ..ರ ನೋಡು…. ಹಾ೦ಯ್ಸರ ನೋಡು…” ಅ೦ತ ಮಾತ್ರ ಹೇಳ್ಬೆಡಿ ಅಕ…

%d bloggers like this: