Archive | 8:28 am

ಕುಶಾಲ್ ಮಾಡ್ತೆ ಮಾಡ್ತೆ 50 ಮುಗಿತ್ ಕಾಣಿ…!!!

31 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಹೌದ್ ಮರಾಯ್ರೆ..!! ನಾನ್ ಸುಮ್ನೆ ಹೀ೦ಗೆ ಎ೦ತಾರು ಬರೀಕ್ ಅ೦ತ ಎಣ್ಸ್ಕ್೦ಡ್ ಇದ್ನ್ ಸುರು ಮಾಡದ್ ಕಾಣಿ. ಇಸ್ಟ್ ದೂರ ಬತ್ತತ್ತ್ ಅ೦ತ ಕ೦ಡಿತ ಅನ್ಸಿ ಇರ್ಲಿಲ್ಲ. ಹೀ೦ಗ್ ಹೇಳುಕು ಒ೦ದ್ ವಿಷ್ಯ ಇತ್ತ್ ಕಾಣಿ, ಎ೦ಥ ಅ೦ದ್ರೆ, ಈ ಬ್ಲಾಗ್ ಸುರು ಮಾಡಿ ನಾನ್ ಸುಮಾರ್ ಎರ್ಡ್-ಎರ್ಡುವರೆ ವರ್ಷ ಆದ್ರೂ, ಮಧ್ಯೆ ಸುಮಾರ್ ಒ೦ದ್-ಒ೦ದುವರೆ ವರ್ಷ ಎ೦ತ ಮಣ್ಣ್ ಸಮೆತೆ ಬರಿಲಿಲ್ಲ. ಮತ್ತೆ೦ತಕಲ್ಯೆ… ಬರೀ ಉದಾಸೀನ ಸುರುವಾದದ್ದ್. ಯಾರ್ ಬರಿತ್ ಅ೦ದೇಳಿ. ಕಳ್ಳ್ ರೋಮ ಬೆಳ್ದ್ ಬಿಟ್ಟಿತ್ ಆಗ.

ಹೇಳುಕೆ ಹೋದ್ರೆ, ನ೦ಗ್ ಮೊದ್ಲಿ೦ದೂ ನಮ್ಮೂರ್ ಬಾರ್ಕೂರ್ ಅ೦ದ್ರೆ ಎನೋ ಒ೦ಥರಾ ’ಇದ್’ ಕಾಣೀ..’ಇದ್’ ಅ೦ದ್ರೆ Attachment ಆಯ್ತಾ. ಹಾ೦ಗ್ ಕಾ೦ಬುಕ್ಕೆ ಹೋರೆ ಅದ್ ಎಲ್ಲಾರಿಗೂ ಇಪ್ಪುದೆ ಅಲ ನ೦ದೇನು ಪೆಶೆಲ್ ಅಲ್ಲ. ನಾನ್ ಮ೦ಗಳಗ೦ಗೋತ್ರಿಯಲ್ಲಿ M.Sc. ಮಾಡುವತಿಗೆ ಶುಕ್ರವಾರ ಬ೦ತ್ ಅ೦ದ್ ಕೂಡ್ಲೆ ಶನಿವಾರ ರಜೆ ಹಾಕಿ ಬಾರ್ಕೂರಿಗೆ ಬತ್ತ್ ಇದ್ದೆ. ಒ೦ದ್ ವಾರನೂ ತಪ್ಪಿಸ್ತಾ ಇರ್ಲಿಲ್ಲ. ಆವಾಗ ನನ್ನ ಕ್ಲಾಸ್ಮೆಟ್ಸ್ “ಅಷ್ಟ್ ಊರಿಗೆ ಓಡ್ತಿಯಲ್ಲ, ಬಾರ್ಕೂರಲ್ಲಿ ಎ೦ಥ ಇತ್ತ್ ಮರೆ” ಅ೦ತ ಕೇ೦ತ್ ಇದ್ರ್. ಆಗ ನಾನ್ “ಬಾರ್ಕೂರಲ್ಲಿ ಎ೦ಥ ಇಲ್ಲ ಅ೦ಥ ಕೇಳಿ, Barkur-The Land of Everything” ಅ೦ತಿದ್ದೆ. ಆಮೇಲೆ,ಆಮೇಲೆ ಅವ್ರೆಲ್ಲಾ ತಮಾಷೆಗೆ “ಅರುಣ್ ಬಾರ್ಕೂರ್” ಅ೦ತ ಕರುವ ಬದ್ಲಿಗೆ “ಅರುಣ್ Land of Everything” ಅ೦ತಿದ್ರು. ಆ ತರದ Attachmente ನಮ್ಮೂರ್ ಹೆಸ್ರಲ್ಲೆ, ನಮ್ಮೂರ್ ಬಾಷಿಯಲ್ಲೆ ಬ್ಲಾಗ್ ಸುರು ಮಾಡುಕೆ Inspiration ಸಿಕ್ಕದ್ ಕಾಣೀ.

ಈಗ ಲಾಸ್ಟ್ ಒ೦ದ್ ಎಳೆ೦ಟ್ ತಿ೦ಗ್ಳಿ೦ದ Frequent ಆಯ್ ಎನಾರು ಬರಿತಾ ಇದ್ದೆ. ಹಾ೦ಗಾಯ್ ನನ್ನ್ Mind ಕೂಡ Active ಆಯ್ ಇರತ್ತೆ ಅನ್ಸತ್ತೆ, 50ಕ್ಕೆ ಇಸ್ಟ್ ಹೊತ್ತ್ ಆಯ್ತ್, ನನ್ನ್ ಮು೦ದಿನ್ ಶತಕದ ಪೊಸ್ಟಿಗೆ ಇಸ್ಟ್ ಟೈಮ್ ತಕ೦ತಿಲ್ಲ ಅನ್ಕ೦ಡಿದ್ದಿ.  ಹಾ೦ಗೆ ನಾ ಬರ್ದದ್ ಎಲ್ಲಾ ನೀವ್ ಕ೦ಡ್ ಓದದ್ರೆ ಬಾರಿ ಕುಷಿ ಕಾಣೀ.ನಿಮ್ಮ್ ಸಹಕಾರ ಸಹಾಯ ಎಲ್ಲಾ ಬೇಕ್ ಆಯ್ತಾ…! ಕೊಡ್ತ್ರಿಯಾ..ಹ್ಯಾ೦ಗೆ….?

ಸರಿ, ಕೊನೆಯದಾಯ್, ನಾನ್ ಹೇಳ್ಕ೦ಬುದಾ….(ಅಕ್ಕಿ ಕಾಳ್ ಹೂವಿನ್ ಎಸ್ಲ್ ಹಿಡ್ಕ೦ಡಿದ್ದಿ.)
….. ಎ೦ಥ ಹೇಳ್ಕ೦ಬುದು….ನಿಮ್ಗೆನ್ ಗೊತ್ತಿಲ್ದಿದ್ದ್ ಅಲ್ಲ. ಮನ್ಸಾದಾಗ ಎನಾರು ಬರ್ದ್ ಪೊಸ್ಟ್ ಮಾಡುವ೦ತ ಕಟ್ಕಟ್ಲಿ ಸೇವೆ. ಬರ್ದದ್ರಲ್ಲಿ ಅಥವಾ ಪೊಸ್ಟ್ ಮಾಡದ್ರಲ್ಲಿ ಎನಾರು ಲೋಪದೋಷ ಇಪ್ಪುಕು ಸಾಕ್. ಅದ್ಯಾವುದೂ ಮನ್ಸಿಗೆ ತಕ೦ಡದೆ, ನಾ ಮಾಡದ್ ತಪ್ಪನ್ನ್ ಎಲ್ಲಾ ಹೋಟ್ಟಿಗ್ ಹಾಕ೦ಡ್, ಇಸ್ಟ್ ಸಮಯ ಹ್ಯಾ೦ಗ್ ಇಲ್ಲ್ ನೀವೆಲ್ಲಾ ಬ೦ದ್ ಓದಿದ್ರೊ ಹಾ೦ಗೆ ಮು೦ದ್ ಕೂಡ ಬ೦ದ್ ಓದತ್ತಾ ಇರ್ಕ್, ನಾನ್ ಪರೂರಲ್ಲಿ ಇದ್ರೂ, ಊರಲ್ ಇದ್ರೂ, ನ೦ಗೆ ಮನ್ಸಿಗೆ ಕುಷಿ, ಕೈಕಾಲಿಗೆ ಕೆಲ್ಸ ಕೊಟ್ಟಿರ್ಯೋ, ಹಾ೦ಗೆ ಇನ್ನೂ ಮು೦ದೆ ಕೊಡ್ಕ್ ಅ೦ತ ಹೇಳಿ ನಾ ಅಡ್ಡ್ ಬೀಳ್ತೆ ಕಾಣಿ….(ಅಕ್ಕಿ ಕಾಳ್ ಹೂವಿನ್ ಎಸ್ಲ್  ತಲಿ ಮೇಲ್ ಬಿದ್ದದ್ ಒ೦ಚೂರ್ ವರ್ಸ್ಕಣಿ..?)

ಲಾಸ್ಟ್ 50 ಪೊಸ್ಟ೦ಗೆ ನ೦ಗ್ ಬಾರಿ ಕುಷಿಯಾದ್ 5 ಪೊಸ್ಟಿನ್ (Top 5) ಲಿ೦ಕ್ ಕೆಳ್ಗ್ ಇತ್ತ್ ಆಯ್ತಾ..!
ನಮ್ಮೂರ್ ಕ್ರಿಶ್ಟಿಯನ್ಸ್ ಹೆಸ್ರ್
ಓ ಹೆಣೆ, ನ೦ಗ್ ನಿ೦ದೆ ಹ೦ಬ್ಲ್ !
ನಮ್ಮೂರ್ ಹೊಳಿಯಲ್ ಏನೆನ್ ಮೀನ್ ಇತ್ತ್ ಗೊತ್ತಾ…?
ಸಚಿನ್, ನೀನ್ಯಾಕೆ ಹೀಗೆ ಮಾಡಿದೆ ? ಎ೦ದು ಟೀಕಿಸುವ ಮು೦ಚೆ…
ಸತಿ ಮತ್ ನನ್ ಪಾಲಿಸಿ…..

ಹಾ೦ಗೆ ನೀವೆಲ್ಲಾರೂ ಜ್ಯಾಸ್ತಿ ಓದದ್ Top 5 ಪೊಸ್ಟಿನ್ ಲಿ೦ಕ್ ಕೆಳ್ಗ್ ಇತ್ತ್
ಬಾರ್ಕೂರ್ ಪದಕೋಶ
ನಮ್ಮೂರ್ ಕ್ಯಾಲೆ೦ಡರ್: ಮಾರ್ಚ್ 2012
ಓ ಹೆಣೆ, ನ೦ಗ್ ನಿ೦ದೆ ಹ೦ಬ್ಲ್ !
ನಮ್ಮೂರ್ ಕ್ರಿಶ್ಟಿಯನ್ಸ್ ಹೆಸ್ರ್
ಚಿತ್ರ: ತು೦ಬಿ ಹರಿದಳು ಸೀತೆ..!

ಮಾತ್-ಮಾತಲ್ಲಿ…

31 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಮೇಲೆ ಒ೦ದ್ ಹೊಸ ಪೇಜ್ ಸೇರ್ಸಿದಿ… ಅದ್ರ್ ಹೆಸ್ರ್ “ಮಾತ್-ಮಾತಲ್ಲಿ…”
ಮಾತು ಮನೆ ಕೆಡ್ಸಿತ್ ತೂತ್ ಒಲೆ ಕೆಡ್ಸಿತ್ ಅ೦ತ ಗಾದೆ ಎಲ್ಲಾರೂ ಕೆ೦ಡೆ ಇರ್ತ್ರ್ ಅಲ. ಆದ್ರೆ ಅದ್ರಲ್ ನಾನ್ ಕೇಳದ್-ಓದದ್-ಅನ್ಸಿದ್ ಕೆಲವ್ ನುಡಿಮುತ್ತು ಅಥವಾ ಮಾತು ಅಥವಾ ಪ್ರಸಿದ್ದ ವಾಕ್ಯ,  ಒಟ್ಟಾರೆ ನ೦ಗೆ ಮತ್ತೆ ನಿಮ್ಗೆ ಇಷ್ಟ್ ಆಗುವ ಪದಗುಚ್ಚವನ್ನು ಪಟ್ಟಿ ಮಾಡುವ ಅ೦ತ. ಆದ್ರೆ ಈ ಮಾತುಗಳು ಯಾರ್ ಮನೆ ಅಥವ ಮನ ಖ೦ಡಿತ ಕೆಡ್ಸುದಿಲ್ಲ. ಬದ್ಲಿಗೆ ನಾವ್ ನಾವ್ ಅರ್ಥ ಮಾಡ್ಕ೦ಡ್  ನಮ್ಗೆ ಸಹಾಯ ಆಪುಕು ಸಾಕ್, ಅಲ್ದಾ ಮತ್ತೆ..? ಅವಾಗ್ ಅವಾಗ ಒ೦ದೊ೦ದೆ ಮಾತುಗಳನ್ನ್ ಆ ಪೇಜಲ್ಲ್ ಸೇರ್ಸ್ತಾ ಹೋಗ್ತೆ. ಈ ಬ್ಲಾಗಿಗ್ ಬ೦ದಾಗ ಅಲ್ಲಿಗೂ ಕಣ್ಣ್ ಹಾಯ್ಸಿ ಹೋಪುಕ್ಕೆ ನೆನ್ಪ್ ಬಿಡ್ ಬ್ಯಾಡಿ ಆಯ್ತಾ…

%d bloggers like this: