Archive | 3:30 pm

ಹ್ವಾಯ್…ನಿಮ್ಗೆಲ್ಲಾ ಸ್ವಾತ೦ತ್ರ್ಯ ದಿನದ ಶುಭಾಶಯಗಳು…

14 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಹ್ವಾಯ್…ನಿಮ್ಗೆಲ್ಲಾ ಸ್ವಾತ೦ತ್ರ್ಯ ದಿನದ ಶುಭಾಶಯಗಳು…..
ಈ ಸಲ 66ನೆಯ ಸ್ವಾತ೦ತ್ರ್ಯ ದಿನ. ನಿಮ್ಗೆಲ್ಲಾ ಶುಭಾಶಯಗಳು. ಬಾರ್ಕೂರಲ್ಲಿ ಎಲ್ಲಾ ಶಾಲಿಯ ಧ್ವಜದಲ್ಲಿ ಬಾವುಟ ಹಾರಿಸಿ ಸಿಹಿತಿ೦ಡಿ ಹ೦ಚತ್ರ್ ಕಾಣಿ. ಆಮೇಲೆ ಹೆಚ್ಚಿನ್ ಶಾಲಿಯಲ್ಲಿ ಮಕ್ಕಳ ಡಾನ್ಸ್ ಮತ್ತೆ ಸಣ್ಣ್ ಸಣ್ಣ್ ನಾಟಕ ಕೂಡ ಇರತ್ತೆ. ನಮ್ಮ್ ಸಿ೦ಹಾಸನ ಗುಡ್ಡೆಯಲ್ಲಿಯೂ ಬಾವುಟ ಹಾರ್ಸು ಕಾರ್ಯಕ್ರಮ ಇರ್ತಿತ್ತ್. ಇಗ್ಲೂ ಇಪ್ಪುಕು ಸಾಕ್ ಅನ್ಸತ್ತೆ.

ನಮ್ಮ್ ದೇಶದ್ದ್ ಸುರುವಿನ್ ಸ್ವಾತ೦ತ್ರ್ಯ ದಿನದ ಕೆಲವ್ ಹಳೆ ಫೋಟೊಗಳು ಕಾಣ್ಕಾರೆ ಕೆಳ್ಗಿನ್ ಲಿ೦ಕ್ ಕ್ಲಿಕ್ ಮಾಡಿ.
ಫಸ್ಟ್ ಸ್ವಾತ೦ತ್ರ್ಯ ದಿನದ (1947) ಕೆಲವ್ ಹಳೆ ಫೋಟೊಗಳು

ಚಿತ್ರ: ಅ೦ತರ್ಜಾಲ

ತಾಯಿ ನೆರೆಯಾಗಿ ಬ೦ದಿಹಳಿ೦ದು…

14 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮೂರ್ ಸೀತಾ ನದಿಯಲ್ಲಿ ಈ ಸಲ ಸುಮಾರ್ ದೊಡ್ಡ್ ನೆರಿ ಬ೦ದಿತ್ತ್. ಎಷ್ಟ್ ದೊಡ್ಡ್ ನೆರಿ ಬ೦ದ್ರೂ ಈ ತನಕ ಯಾರಿಗೂ ತೊ೦ದ್ರೆ ಆಗಿದ್ದಿಲ್ಲ. ಬದ್ಲಿಗೆ ಯಾವಾಗ್ಲೂ ತಾಯಿ ಸೀತಾ ನದಿಯಿ೦ದ ಒಳ್ಳೆಯದೆ ಆಗಿದೆ.

ನೆರಿ ವಿಷ್ಯ ಓದ್ಕಾರೆ ಕೆಳ್ಗಿನ್ ಲಿ೦ಕ್ ಕ್ಲಿಕ್ ಮಾಡಿ ಆಯ್ತಾ…!
ಕೂಯ್..! ನಮ್ಮೂರಲ್ ನೆರಿ ಬ೦ದಿತ್. ದೋಣಿ ತಕ೦ಡ್ ಬನಿ…

ಇನ್ನೂ ಜ್ಯಾಸ್ತಿ ನೆರಿ ಫೋಟೊ ಕಾಣ್ಕ೦ಬ೦ಗಿದ್ರೆ ಕೆಳ್ಗಿನ್ ಲಿ೦ಕ್ ಕ್ಲಿಕ್ ಮಾಡಿ ಆಯ್ತಾ…!
ಚಿತ್ರ: ತು೦ಬಿ ಹರಿದಳು ಸೀತೆ..!

ಚಿತ್ರ: ಫಸ್ಟ್ ಸ್ವಾತ೦ತ್ರ್ಯ ದಿನದ ಕೆಲವ್ ಹಳೆ ಫೋಟೊಗಳು

14 Aug

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ನಮ್ಮ್ ದೇಶದ್ದ್ ಸುರುವಿನ್ ಸ್ವಾತ೦ತ್ರ್ಯ ದಿನದ (1947) ಕೆಲವ್ ಹಳೆ ಫೋಟೊಗಳು ಕೆಳ್ಗೆ ಇತ್ತ್. ಒ೦ದ್ಸಲ ಕಣ್ಣ್ ಹೊಳ್ಸಿ ಕಾಣಿ ಆಯ್ತಾ. ಆ ದಿನ ಆಚರ್ಸುವತಿಗೆ ನಾವ್ ಹೆಚ್ಚಿನವ್ರ್ ಇನ್ನೂ ಹುಟ್ಲಿಲ್ಲ ಅಲ್ಯಾ, ಅದ್ಕಾರು ಒ೦ದ್ಸಲ ಹ್ಯಾ೦ಗ್ ಇದ್ದಿತ್ ಅ೦ತ ಕಾಣಿ.

ಚಿತ್ರಗಳ ಸ೦ಗ್ರಹ: ಅ೦ತರ್ಜಾಲ

%d bloggers like this: