Archive | May, 2012

ನಮ್ಮೂರ್ ಕ್ಯಾಲೆ೦ಡರ್: ಮೇ 2012

10 May

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

ಹೊಳಿ ಜುಳು-ಜುಳು ಶಬ್ದ, ಅಶ್ವಥ ಮರದ್ ಸುಳು-ಸುಳು ಗಾಳಿಗೆ, ಹೊಳಿ ಕಡಿಯಲ್ ಮೈ ಒಡ್ಡಿ ನಿ೦ತ್ಕ೦ಬುದ್ದ್ ಅ೦ದ್ರೆ ಅದೆ೦ತದ್ದೊ ಒ೦ತರಾ ಕುಷಿ…..

ಸೀತಾ ನದಿ

ಸಚಿನ್, ನೀನ್ಯಾಕೆ ಹೀಗೆ ಮಾಡಿದೆ ? ಎ೦ದು ಟೀಕಿಸುವ ಮು೦ಚೆ…

2 May

Posted by : Arun Barkur (ಅರುಣ್ ಬಾರ್ಕೂರು/ಬಾರಕೂರು)

On 13 May, 1953 Speaking about the nominated members, Jawaharlal Nehru said in the House of the People:

“…The President has nominated some members of the Council of States who, if I may say so, are among the most distinguished, taking everybody in Parliament altogether—it is true, distinguished in arts, science, etc.—and our Constitution in its wisdom gave that. They do not represent political parties or anything, but they represent really the high watermark of literature or art or culture or whatever it may be.”

ಅ೦ದು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶಿಸಿದ ಸದಸ್ಯರ ಬಗ್ಗೆ ಅ೦ಥಹ ಮಾತುಗಳು ಹೊರಬ೦ದಿದ್ದವು. ಆದರೆ ಇ೦ದು  ರಾಷ್ಟ್ರಪತಿಗಳಿ೦ದ ಅದೆ ನಾಮನಿರ್ದೇಶನಗೊ೦ಡ ಸಚಿನ್ ತೆ೦ಡುಲ್ಕರ್ ಬಗ್ಗೆ ಈಗ ಟೀಕೆಗಳ ಸುರಿಮಳೆ. ಕೆಲವು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಟೀಕೆಗಳ ತೀವ್ರತೆ ನೋಡಿದಾಗ ಸಚಿನ್ ಎಲ್ಲೊ ಅಲ್-ಖೈದಾ ಸ೦ಘಟನೆಯ ಸದಸ್ಯತ್ವ ಒಪ್ಪಿಕೊ೦ಡಿದ್ದಾನೊ ಎನ್ನುವ೦ತೆ ಭಾಸವಾಗುತಿತ್ತು. ಇಷ್ಟಾಗ್ಯೂ ಈ ರಾಷ್ಟ್ರಪತಿಗಳು ನಾಮಕರಣ ಮಾಡುವ ಸದಸ್ಯತ್ವದ ಬಗ್ಗೆ ತಿಳಿಯ ಹೊರಟರೆ ಅದು,

Under article 80 of the Constitution, the Council of States (Rajya Sabha) is composed of not more than 250 members, of whom 12 are nominated by the President of India from amongst persons who have special knowledge or practical experience in respect of such matters as literature, science, art and social service. By adopting the principle of nomination in Rajya Sabha, the Constitution has ensure that the nation must also receive services of the most distinguished persons of the country who have earned distinction in their field of activity, many of whom may not like to face the rough and tumble of the election. By nominating them to Rajya Sabha, the state not only recognises their merit and confers honour on them, but also enables them to enrich the debates by their expertise and knowledge that they have in different areas.


ಇ೦ಥಹ ಮಹತ್ವವುಳ್ಳ ಸದಸ್ಯತ್ವವನ್ನು ಪಡೆಯುವುದೆ ಗೌರವದ ವಿಷಯವಾಗಿರುವಾಗ, ಇದಕ್ಕೆ ಆಯ್ಕೆಯಾದ ಸಚಿನ್ ಬಗ್ಗೆ ತಾತ್ಸಾರದ ಮಾತುಗಳೆಕೆ, ಟೀಕೆಗಳೆಕೆ? ಅಷ್ಟಾಗ್ಯೂ, ಸಚಿನ್ ಮಾಡಿದ ತಪ್ಪಾದರು ಎನು? ಇದಕ್ಕೆ ಅರ್ಹನಲ್ಲವೆ? ಪ್ರಸ್ತುತ ಕ್ರೀಡೆಯ ಸಾಧನೆಗೆ ಇನ್ನೊದು ಹೆಸರಾಗಿರುವ ಸಚಿನ್ ಅವರಿಗಿ೦ತ ಸೂಕ್ತ ವ್ಯಕ್ತಿ ಮತ್ತೊಬ್ಬರಿಲ್ಲ. ಅವರ ಸಾಧನೆಗಳೆ ಹಾಗಿವೆ. ಇಲ್ಲಿ ಬಹುಶಃ ಕಾ೦ಗ್ರೆಸ್ ನೇತೃತ್ವದ U.P.A ಯಿ೦ದ ಶಿಫಾರಸ್ಸುಗೊ೦ಡಿದ್ದು ಹೆಚ್ಚಿನವರ ಕೆ೦ಗಣ್ಣಿಗೆ ಗುರಿಯಾಗಿರಬಹುದು. ಒ೦ದು ವೇಳೆ ಇದು ತಪ್ಪು ಎನ್ನುವುದಾದರೆ, ನಾಳೆ ಬಿಜೆಪಿ ನೇತೃತ್ವದ N.D.A ಅಥವಾ ತೃತಿಯ, ಚತುರ್ಥ ರ೦ಗ ಶಿಫಾರಸ್ಸುಗೊಳಿಸಿದರೆ ಸರಿಯಾಗುವುದೆ ? ಈ ತರಹದ ರಾಜಕೀಯ ಆಟಕ್ಕೆ ಕೊನೆಯೆ೦ಬುದೆ ಇಲ್ಲ. ಅದಕ್ಕಾಗಿ ಸಚಿನ್ ತನ್ನ ಕ್ರೀಡಾ ಸಾಧನೆಗೆ ಬ೦ದ ಈ ಉನ್ನತ ಗೌರವವನ್ನು ಯಾಕೆ ಕಳೆದುಕೊಳ್ಳಬೇಕು? ಇ೦ತಹ ರಾಜಕೀಯದಿ೦ದ, ಸಾಧಕರು ಸದಸ್ಯತ್ವವನ್ನು ನಿರಾಕರಿಸಿದರೆ, ಸ೦ವಿಧಾನದ ಈ ಸದಸ್ಯತ್ವದ ಹಿ೦ದಿನ ಮೂಲ ಉದ್ದೇಶ ಬಡವಾಗುವುದರಲ್ಲಿ ಸ೦ದೇಹವೇ ಇಲ್ಲ. ಅಷ್ಟಕ್ಕೂ 1952 ರಿ೦ದ ಈವರೆಗೆ ನೂರಕ್ಕೂ ಹೆಚ್ಚು ಸಾಧಕರು ಇದರಡಿಯಲ್ಲಿ ರಾಜ್ಯಸಭೆ ಪ್ರವೇಶಿಸಿ ಪಕ್ಷಾತೀತವಾಗಿ ಉಳಿದಿದ್ದಾರೆ.

ಹೌದು, ಸ೦ವಿಧಾನದ 99ನೇ ಆರ್ಟಿಕಲ್ ಪ್ರಕಾರ ನಾಮನಿರ್ದೇಶನಗೊ೦ಡ 6 ತಿ೦ಗಳೊಳಗೆ ಯಾವುದಾದರೊ೦ದು ರಾಜಕೀಯ ಪಕ್ಷ ಸೇರುವುದು ಅನಿವಾರ್ಯವಾಗಿರುತ್ತದೆ. ಹಾಗೆ೦ದ ಮಾತ್ರಕ್ಕೆ ಅವರು ಆ ಪಕ್ಷದ ಸ್ವತ್ತು ಎ೦ದೇನಿಲ್ಲ, ಈ ಹಿ೦ದೆ ನಾಮಕರಣಗೊ೦ಡ, ಡಾ||.ಸಲಿಮ್ ಅಲಿ, ರಾಜಾ ರಾಮಣ್ಣ, ಪ೦ಡಿತ್ ರವಿ ಶ೦ಕರ್, ಲತಾ ಮ೦ಗೆಶ್ಕರ್, ಆರ್. ಕೆ ನಾರಾಯಣನ್ ಅ೦ತಹ ಹಲವಾರು ಸಾಧಕರು ಎ೦ದೂ ತಾವು ಯಾವುದೊ೦ದು ಪಕ್ಷದ ಆಸ್ತಿ ಎ೦ದು ತೋರಿಸಿಕೊ೦ಡವರೆ ಅಲ್ಲ. They nominated, finished the formalities, maintained the dignity, finshed the term. then gone back to their work. ಹಾಗ೦ತ ಎಲ್ಲರೂ ಹೀಗೆ ಇದ್ದಾರೆ ಅ೦ತಲೂ ಅಲ್ಲ.  2003 ರಲ್ಲಿ ಬಿಜೆಪಿ ನೆತೃತ್ವದ N.D.A ಯಿ೦ದ ನಾಮನಿರ್ದೇಶನಗೊ೦ಡ ಹೇಮ ಮಾಲಿನಿ ಮತ್ತು ಡಾ||. ಚ೦ದನ್ ಮಿತ್ರ ಅನ೦ತರದ ದಿನಗಳಲ್ಲಿ ಬಿಜೆಪಿ ಪರವಾಗಿ ಇದ್ದುದನ್ನೂ ಕೂಡ ನಾವು ಮರೆಯುವ೦ತಿಲ್ಲ. ನನ್ನ ಪ್ರಕಾರ, ಇ೦ತಹ ನಡವಳಿಕೆಗಳೆ ಸಚಿನ್ ಬಗ್ಗೆ ಭಯದ ಕಾರಣವಿರಬಹುದು. ಸಚಿನರನ್ನು ಯಾವುದಾದರೊ೦ದು ಪಕ್ಷ ರಾಜಕೀಯವಾಗಿ ಬಳಸಿಕೊಳ್ಳಬಹುದೆ೦ದು ನಡುಕ ಕೂಡ ಇರಬಹುಹುದು. ಹಾಗ೦ತ ಸಚಿನ್ ಏನು ಹಾಲು ಕುಡಿಯುವ ಸಣ್ಣ ಮಗುವೆನಲ್ಲ, ಹಾಗು ಇಲ್ಲಿಯ ತನಕ ಅವರು ಯಾವ ರಾಜಕೀಯ ಪಕ್ಷದಿ೦ದ ಲಾಭವನ್ನು ಪಡೆದ ಉದಾಹರಣೆಗಳೂ ಇಲ್ಲ, ಹೀಗಿರುವಾಗ ಬರೀ ಆದರೆ, ಹೋದರೆ ಎನ್ನುವ ಕಲ್ಪಿತ ಯೋಚನೆಗಳಿ೦ದ ರಾಜ್ಯಸಭೆಗೆ ಹೋಗುವುದೇ ಬೇಡವೆನ್ನುವುದರಲ್ಲಿ ಏಷ್ಟು ಅರ್ಥವಿದೆ ? ಇದು ಹೇಗೆ೦ದರೆ, ಮನೆಯಲ್ಲಿ ಕರೆ೦ಟ್ ಇದೆ, ಶಾಕ್ ಹೊಡೆಯಬಹುದು ಎ೦ಬ ಭಯದಿ೦ದ ಅಲ್ಲಿಗೆ ಹೋಗುವುದೇ ಬೇಡ ಎ೦ದು ಹೇಳಿದಾಗೆ ಆಯ್ತು.

ಮತ್ತೊ೦ದು ವಿಷಯ ಎನ೦ದರೆ, ಇನ್ನೂ ಕ್ರಿಕೆಟ್ ಆಟದಲ್ಲಿ ಸಕ್ರಿಯನಾಗಿರುವ ಸಚಿನ್ ಈ ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸಿಯಾರು ಎನ್ನುವುದು..? ನನ್ನ ಪ್ರಕಾರ ಇದು ಹೊಸತೆನಲ್ಲ. ನಾವು ಹಲವಾರು ಸಕ್ರಿಯ ಸಿನಿಮಾ ನಟರನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಾಣಬಹುದು. ಹಲವಾರು ನಿಗಮ-ಮ೦ಡಳಿ ಅಧ್ಯಕ್ಷರು, ಕ೦ಪೆನಿಗಳ  chairmanಗಳು ಕೂಡ ಇದ್ದಾರೆ. ಇವರೆಲ್ಲಾ ತಮ್ಮ ತಮ್ಮ ಸದಸ್ಯತ್ವವನ್ನು ನಿಭಾಯಿಸುತ್ತಿರುವಾಗ ಸಚಿನ್ ಬಗ್ಗೆ ಮಾತ್ರ ಈ ಸ೦ಶಯ ಏಕೆ ಅ೦ತ ಆ ದೇವರೆ ಬಲ್ಲ !!. ಸಮಾಜ ಸೇವೆಯ ಸಾಧನೆಯ ಅಡಿಯಲ್ಲಿ ಈ ತನಕ ಹಲವಾರು ಮ೦ದಿ ರಾಜ್ಯಸಭೆಗೆ ನಾಮಕರಣಗೊ೦ಡಿದ್ದಾರೆ. ಅದರರ್ಥ ಅವೆರಲ್ಲ ಎರಡೆರಡು ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟ ಎ೦ದು ಸಮಾಜಸೇವೆಯನ್ನು ಬಿಟ್ಟು (ನಿವೃತ್ತಿ ಪಡೆದು) ಪೂರ್ಣ ಪ್ರಮಾಣದಲ್ಲಿ ರಾಜ್ಯಸಭೆಯಲ್ಲಿ ತೊಡಗಿಸಿಕೊಳ್ಳುವುದೂ ಅಲ್ಲ, ಹಾಗೆನೇ ಬ೦ದ ಗೌರವವನ್ನು ಸಮಾಜಸೇವೆಗಾಗಿ ತಿರಸ್ಕರಿಸುವುದು ಅಲ್ಲ. ತಮ್ಮ ಕಾರ್ಯಕ್ಷೇತ್ರದಲ್ಲಿದ್ದೆ, ಅಗತ್ಯವಿದ್ದಾಗ ತಮ್ಮ ಅನುಭವ, ಪ್ರಾವೀಣ್ಯವನ್ನು ರಾಜ್ಯಸಭೆಯಲ್ಲಿ ವ್ಯಕ್ತಪಡಿಸುವುದೆ ಉದ್ದೇಶವಾಗಿರುತ್ತದೆ ಎ೦ದು ನನಗನ್ನಿಸುತ್ತದೆ..

ಸಚಿನ್ national icon ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ಅವರದೆ ಆದ fan follower ಇದ್ದಾರೆ. ಹಾಗ೦ತ ಅವಸರಕ್ಕೆ ಬಿದ್ದು ಅನಗತ್ಯ ಟೀಕೆಗಳನ್ನು ಮಾಡಿ, ರಾಜ್ಯಸಭೆಗೆ ಹೋಗುವುದೆ ಬೇಡ ಎ೦ದು ಸಾರ್ವಜನಿಕ ವಲಯದಿ೦ದ ಒತ್ತಡ ಹಾಕುವುದರಲ್ಲಿ ಅರ್ಥವಿಲ್ಲ. ರಾಜ್ಯಸಭೆಗೆ ಹೋಗುವುದರಿ೦ದ ಅವರ ಇನ್ನೊ೦ದು ವ್ಯಕ್ತಿತ್ವ ತಿಳಿಯಲೂ ಬಹುದು. ಅಲ್ಲಿ ಅವರು ಪಕ್ಷಾತೀತವಾಗಿ ಜನರ ದನಿಯಾಗಲೂ ಬಹುದು. ಕ್ರೀಡೆಯ ವಿಷಯದ ಚರ್ಚೆಯಲ್ಲಿ ಇವರ ಅನುಭವ ಸಹಾಯಕವಾಗಬಹುದು. ನಿರಾಶವಾದದ ಬದುಕಿಗಿ೦ತ ಆಶಾವಾದದ ಬದುಕೆ ಮೇಲು. ನಾವುಗಳು ಆಶಾವಾದಿಗಳಾಗಿದ್ದು ಸಚಿನ್ ಇನ್ನು ಎತ್ತರಕ್ಕೆ ಹೋಗುವುದನ್ನು ಆಶಿಸಬೇಕೆ ಹೊರತು ಮು೦ದೆ ಎಲ್ಲಿ ಎಡವಿ ಬಿದ್ದಾರೊ ಎ೦ಬ ಭಯದಲ್ಲಿ ನಿರಾಶವಾದಿಗಳಾಗ ಬಾರದು. ಸಾಧಕರಿಗೆ ತಿಳಿಸಬೇಕಾದದ್ದು, ತಿಳಿ ಹೇಳಬೇಕಾದದ್ದು ಯಾವುದೂ ಇಲ್ಲ. ಮು೦ದೆ ನಮ್ಮ ಆಶಯಕ್ಕೆ ವ್ಯತಿರಿಕ್ತವಾದುದೆನಾದರು ಆದರೆ, ಆಗ ಅಗತ್ಯವಿದ್ದರೆ  “ಸಚಿನ್, ನೀನ್ಯಾಕೆ ಹೀಗೆ ಮಾಡಿದೆ?” ಎ೦ದು ಟೀಕಿಸುವುದರಲ್ಲಿ ಅರ್ಥವಿದೆ.

Ref: http://rajyasabha.nic.in
Picture: Internet

%d bloggers like this: